ಬೆಂಗಳೂರು: ನಗರದ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಸಿಎಂಆರ್ಐಟಿ) ‘ಕಲ್ಚರಾ-26’ ರಾಷ್ಟ್ರಮಟ್ಟದ ‘ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವ’ ನೆರವೇರಿತು. ಎರಡು ದಿನ ನಡೆದ ಸಾಂಸ್ಕೃತಿಕ ವೈವಿಧ್ಯಮಯ ಕಲವರಗಳ ಸಂಭ್ರಮದಲ್ಲಿ ಯುವಜನರು ಪಾಲ್ಗೊಂಡರು.

2026ರ ‘ಮಿಸ್ ಗ್ರ್ಯಾಂಡ್ ತಮಿಳುನಾಡು’ ಕಿರೀಟ ಮುಡಿಗೇರಿಸಿಕೊಂಡಿರುವ ಸಿಎಂಆರ್ಐಟಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ ಲಕ್ಷಿತಾ ತಿಲಗರಾಜ್ ಉದ್ಘಾಟಿಸಿದರು. ಪ್ರಾಂಶುಪಾಲ ಸಂಜಯ್ ಜೈನ್, ಉಪ ಪ್ರಾಂಶುಪಾಲ ಬಿ. ನರಸಿಂಹ ಮೂರ್ತಿ, ವಿವಿಧ ವಿಭಾಗಗಳ ಡೀನ್ ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಲರವದಲ್ಲಿ 100ಕ್ಕೂ ಹೆಚ್ಚು ಕಾಲೇಜುಗಳಿಂದ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 52ಕ್ಕೂ ಹೆಚ್ಚು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಕೌಶಲ ಪ್ರದರ್ಶಿಸಿದರು.

‘ಮಾಫಿಯಾ ಥೀಮ್’ನಲ್ಲಿ ನಡೆದ ಫ್ಯಾಷನ್ ಶೋ ನೋಡುಗರ ಗಮನ ಸೆಳೆಯಿತು. ಹತ್ತು ತಂಡಗಳು ಸ್ಪರ್ಧಿಸಿದ್ದು, ಚೆನ್ನೈನ ಎ.ಎಂ ಜೈನ್ ಕಾಲೇಜಿನ ಇಟಾಲಿಯನ್ ಶೈಲಿಯ ಉಡುಪುಗಳ ಪ್ರದರ್ಶನ ವಿಶೇಷ ಮೆಚ್ಚುಗೆ ಪಡೆಯಿತು. ಡಿಜೆ ನೈಟ್, ಹೆಮ್ಮೆಯ ಕನ್ನಡಿಗ, ಅಭಿನಯ ಚಕ್ರವರ್ತಿ, ಕನ್ನಡ ಕುವರ, ಸ್ಟ್ಯಾಂಡಪ್ ಕಾಮಿಡಿ, ರೋಬೊ ರೇನ್ ಹಾಗೂ ಫಿಫಾ ಫೋಟೊಗ್ರಫಿಯಂತಹ ವಿನೂತನ ಸ್ಪರ್ಧೆಗಳು ನಡೆದವು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಸಿ. ರಾಮಮೂರ್ತಿ ಮಾತನಾಡಿ, ‘ಕಲ್ಚರಾ ನಮ್ಮ ಸಂಸ್ಥೆಯ ಹೆಮ್ಮೆಯ ಹಬ್ಬ. ಓದಿನ ಜೊತೆಗೆ ಕಲೆಯನ್ನೂ ಮೈಗೂಡಿಸಿಕೊಳ್ಳುವುದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ’ ಎಂದು ಹೇಳಿದರು.

ಚಿತ್ರ ನಟಿ ಸಿಂಧು ಮಹೇಶ್ ಮತ್ತು ನಟ ಭರತ್ ಸಾಗರ್ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.