ಸಿಎನ್‌ಜಿ ಬಳಕೆ: ಗೈಲ್‌, ಉಬರ್‌ ಒಡಂಬಡಿಕೆ

7

ಸಿಎನ್‌ಜಿ ಬಳಕೆ: ಗೈಲ್‌, ಉಬರ್‌ ಒಡಂಬಡಿಕೆ

Published:
Updated:

ಬೆಂಗಳೂರು: ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಬಳಕೆ ಪ್ರೋತ್ಸಾಹಿಸಲು ಗೈಲ್‌ ಗ್ಯಾಸ್‌ ಕಂಪನಿ ಹಾಗೂ ಉಬರ್‌ ಬುಧವಾರ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿವೆ.

ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ‘ಹಸಿರು ಬೆಂಗಳೂರು’ ಸಿಎನ್‌ಜಿ ಇಂಧನ ಪೂರೈಕೆ ಕೇಂದ್ರ ಉದ್ಘಾಟನೆ ವೇಳೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮೊದಲ 500 ಕಾರುಗಳಿಗೆ ಉಚಿತವಾಗಿ ಇಂಧನ ಪೂರೈಸಲು ಗೈಲ್‌ ನಿರ್ಧ ರಿಸಿದ್ದರೆ, ಸೇರ್ಪಡೆ ಬಹುಮಾನವಾಗಿ ಮೊದಲ 500 ಕಾರು ಚಾಲಕರಿಗೆ ₹10,000 ನೀಡುವುದಾಗಿ ಉಬರ್‌ ಘೋಷಿಸಿದೆ.

‘ಸಿಎನ್‌ಜಿ ಇಂಧನ ಬಳಸುವುದರಿಂದ ಟ್ಯಾಕ್ಸಿ ಚಾಲಕರಿಗೆ ತಿಂಗಳಿಗೆ ₹15 ಸಾವಿರ ಉಳಿತಾಯವಾಗಲಿದೆ. ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಉಬರ್ ಟ್ಯಾಕ್ಸಿಗಳಿಗೆ ಸಿಎನ್‌ಜಿ ಇಂಧನ ತುಂಬಿಸಿ, ಬಳಕೆಗೆ ಪ್ರೋತ್ಸಾಹಿಸಲು ನಾವು ಸಿದ್ಧರಿದ್ದೇವೆ’ ಎಂದು ಉಬರ್‌ ಕಂಪನಿಯ ಮಧು ಖನ್ನಾ ತಿಳಿಸಿದರು.

ಲಗ್ಗೆರೆ, ಎಪಿಸಿ ವೃತ್ತ (ಜಿಗಣಿ), ಪೀಣ್ಯ ಕೈಗಾರಿಕಾ ಪ್ರದೇಶ, ಸುಂಕದಕಟ್ಟೆ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಲ್ಲಿ ನಾಲ್ಕು ಸಿಎನ್‌ಜಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಅಗರ, ಕೆ.ಆರ್.ಪುರ, ಗೊರವಿಗೆರೆ, ಹೊಸ ವಿಮಾನ ನಿಲ್ದಾಣ ರಸ್ತೆ, ಟಾಟಾ ನಗರಗಳಲ್ಲಿ ಸಿಎನ್‌ಜಿ ಕೇಂದ್ರಗಳು ಪ್ರಾರಂಭಗೊಳ್ಳಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !