ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಕಾರ ಬ್ಯಾಂಕ್ ಕಂಪ್ಯೂಟರೀಕರಣ’

Last Updated 15 ಸೆಪ್ಟೆಂಬರ್ 2019, 19:58 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ‘ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ವ್ಯಾಪ್ತಿಯ ಎಲ್ಲ ಸಹಕಾರ ಬ್ಯಾಂಕ್‌ಗಳನ್ನು ಅಕ್ಟೋಬರ್‌ನಿಂದ ಸಂಪೂರ್ಣ ಗಣಕೀಕೃತಗೊಳಿಸಲಾಗುವುದು’ ಎಂದು ಅಪೆಕ್ಸ್‌ ಹಾಗೂ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಡಿ. ಹನುಮಂತಯ್ಯ ಹೇಳಿದರು.

ರಾಮೋಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಾಥಮಿಕ ಕೃಷಿ ಸಹಕಾರ ಸಂಘ, ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಸೇರಿದಂತೆ ಎಲ್ಲ ಸಹಕಾರ ಬ್ಯಾಂಕ್‍ಗ
ಳನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕಂಪ್ಯೂಟರೀಕರಣಗೊಳಿಸಲಾಗುತ್ತಿದೆ’ ಎಂದರು.

‘ಸಾರ್ವಜನಿಕರು ಸಹಕಾರ ಬ್ಯಾಂಕುಗಳ ಯೋಜನೆಯ ಲಾಭ ಪಡೆದುಕೊಂಡು ಅವುಗಳ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದರು.

ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ವಿ.ವೇಣುಗೋಪಾಲ್, ‘ಈ ಮೊದಲು ಬ್ಯಾಂಕ್ ಸೂಪರ್ ಸೀಡ್ ಆಗಿತ್ತು. ಸಹಕಾರ ಇಲಾಖೆಯಿಂದ ಮತ್ತೆ ಅನುಮತಿ ತಂದು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಲಾಭ ಗಳಿಸುವಂತೆ ಮಾಡಿದ್ದೇನೆ’ ಎಂದರು.

ಉಪಾಧ್ಯಕ್ಷೆ ವಿ.ಬಿ.ಶೋಭಾ, ‘ಸ್ತ್ರೀಶಕ್ತಿ ಸಂಘ, ರೈತರಿಗೆ ₹5 ಲಕ್ಷದ ವರೆಗೆ ಬಡ್ದಿ ರಹಿತ ಸಾಲದ ಜೊತೆಗೆ ಹಲವು ಸವಲತ್ತುಗಳನ್ನು ನೀಡಿದೆ’ ಎಂದರು. ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಎಂ.ಸುರೇಶ್ ವರದಿ ಮಂಡಿಸಿ ದರು. ನಿರ್ದೇಶಕರಾದ ಅನಂತರಾವ್, ಲಕ್ಷ್ಮಯ್ಯ, ಚೌಡರೆಡ್ದಿ, ನಾಗರಾಜು, ಪ್ರಕಾಶ್, ಗೋವಿಂದರಾಜು, ಜಲಜಾಕ್ಷಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT