ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣ: ಆರೋಪಿಗಳ ವಿರುದ್ಧ ಕೋಕಾ ಜಾರಿ

Last Updated 23 ಜೂನ್ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ಶಾಲೆಯ ಪ್ರಾಂಶುಪಾಲರನ್ನು ಅಪಹರಿಸಿ ಕೊಳ್ಳೇಗಾಲ ಅರಣ್ಯದಲ್ಲಿ ಒತ್ತೆ ಇರಿಸಿದ್ದ ಎಂಟು ಆರೋಪಿಗಳ ವಿರುದ್ಧ ಕೋಕಾ (ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಜಾರಿಗೊಳಿಸಲಾಗಿದೆ.

ಪ್ರಕರಣದಲ್ಲಿ ಕರ್ನಾಟಕ ಸ್ಟೂಡೆಂಟ್ ಪೇರೆಂಟ್ಸ್ ಅಸೋಸಿಯೇಷನ್ ಎಂಬ ಸಂಘ ಕಟ್ಟಿಕೊಂಡಿದ್ದ ಪೀಣ್ಯದ ನಿವಾಸಿ ರವಿ, ಲಕ್ಷ್ಮಣ ಪೂಜಾರಿ, ಕಾರ್ತಿಕ್ ಎಂ. ದೌಲತ್, ಡೇನಿಯಲ್ ದೇವರಾಜ್, ಅಯ್ಯಪ್ಪ, ಕೊಟ್ರೇಶ, ರಾಮಕೃಷ್ಣ ಮತ್ತು ಮಂಜುಶ್ರೀ ಅವರನ್ನು ವಿಜಯನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫೆ. 19‌ರಂದು ಬೆಳಿಗ್ಗೆ ವಾಯವಿಹಾರ ನಡೆಸುತ್ತಿದ್ದ ಕಿರಣ್ ಪಬ್ಲಿಕ್ ಶಾಲೆಯ ಮಾಲೀಕರು ಹಾಗೂ ಪ್ರಾಂಶುಪಾಲರೂ ಆಗಿರುವ ಭದ್ರಯ್ಯ ಅವರನ್ನು ಆರೋಪಿಗಳು ಅಪಹರಿಸಿದ್ದರು. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಮೊದಲು ಜೈಲಿಗೆ ಹೋಗಿದ್ದ ಆರೋಪಿ ರವಿ, ಅಕ್ರಮ ಗನ್ ಡೀಲರ್ ಲಕ್ಷ್ಮಣ ಪೂಜಾರಿ ಮತ್ತು ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಕಾರ್ತಿಕ್ ಎಂ. ದೌಲತ್ ಎಂಬುವವರನ್ನು ಪರಿಚಯಿಸಿಕೊಂಡು ಭದ್ರಯ್ಯ ಅವರನ್ನು ಅಪಹರಿಸಿ ₹ 2 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಯೋಜನೆ ವಿಫಲವಾಗಿದ್ದರಿಂದ ಭದ್ರಯ್ಯ ಅವರನ್ನು ಆರೋಪಿಗಳು ಬಿಟ್ಟು ಕಳುಹಿಸಿದ್ದರು. ಪ್ರಕರಣವು ಸಿಸಿಬಿ ಮತ್ತು ಸಂಘಟಿತ ಅಪರಾಧ ದಳಕ್ಕೆ ವರ್ಗಾವಣೆಯಾಗಿತ್ತು.

‘ಆರೋಪಿಗಳು ಸಂಘಟಿತರಾಗಿ, ತಮ್ಮದೇ ಗುಂಪು ಕಟ್ಟಿಕೊಂಡು ಆಗಾಗ ತಮ್ಮ ತಂಡದ ಸದಸ್ಯರನ್ನು ಬದಲಾಯಿ‌ಸುತ್ತಾ ಅಪರಾಧ ಕೃತ್ಯ ಎಸಗಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದುದು ತನಿಖೆ ವೇಳೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿಗೊಳಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT