ಗುರುವಾರ , ಡಿಸೆಂಬರ್ 5, 2019
19 °C
ಪ್ರಜಾವಾಣಿ 'ಫಲಶ್ರುತಿ'

ಪದೋನ್ನತಿ ವೇಳೆ ತಪ್ಪು: ತಿದ್ದುಪಡಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರಿಗೆ ಹಿರಿಯ ವೇತನ ಶ್ರೇಣಿಯಿಂದ ಆಯ್ಕೆ ವೇತನ ಶ್ರೇಣಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸುವಾಗ ಆಗಿದ್ದ ತಪ್ಪನ್ನು ಸರಿಪಡಿಸಿ ಇದೀಗ ಹೊಸದಾಗಿ ತಿದ್ದುಪಡಿ ಆದೇಶ ಹೊರಡಿಸಲಾಗಿದೆ.

ಆದೇಶದಲ್ಲಿ ತಪ್ಪುಗಳು ಉಳಿದಿರುವ ಬಗ್ಗೆ ‘ಪ‍್ರಜಾವಾಣಿ’ ಇದೇ 16ರಂದು ವರದಿ ಪ್ರಕಟಿಸಿತ್ತು. ತಕ್ಷಣ ಎಚ್ಚೆತ್ತುಕೊಂಡಿರುವ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಪ್ಪನ್ನು ಸರಿಪಡಿಸಿ ಆದೇಶ ಹೊರಡಿಸಿದ್ದಾರೆ.

‘ಆದೇಶದಲ್ಲಿನ ತಪ್ಪು ಹಾಗೆಯೇ ಉಳಿಯುತ್ತಿದ್ದರೆ ಹಲವಾರು ಉಪನ್ಯಾಸಕರಿಗೆ ಅನ್ಯಾಯವಾಗುತ್ತಿತ್ತು. ಆದೇಶ ರಾಜ್ಯಪತ್ರದಲ್ಲಿ ಸೇರಿದ್ದೇ ಆಗಿದ್ದರೆ ಅದನ್ನು ತಿದ್ದುಪಡಿ ಮಾಡಲು ಉಪನ್ಯಾಸಕರು ಹಲವು ತಿಂಗಳು ಅಲೆದಾಟ ನಡೆಸಬೇಕಾಗುತ್ತಿತ್ತು. ಈ ಬಗ್ಗೆ ಸಕಾಲದಲ್ಲಿ ವರದಿ ಪ್ರಕಟವಾದ ಕಾರಣ ಅನ್ಯಾಯವನ್ನು ಬಹುಬೇಗನೆ ಸರಿಪಡಿಸುವುದು ಸಾಧ್ಯವಾಯಿತು’ ಎಂದು ಹಲವು ಉಪನ್ಯಾಸಕರು ಪ್ರತಿಕ್ರಿಯಿಸಿದರು. 

ಪ್ರತಿಕ್ರಿಯಿಸಿ (+)