ಬೆಂಗಳೂರು: ವಾಣಿಜ್ಯ ಬಳಕೆಯ ಎಲ್ಪಿಜಿ ದರ ಹೆಚ್ಚಳ ಬೆನ್ನಲ್ಲೇ ಹೋಟೆಲ್ಗಳ ಆಹಾರ ದರ ಹೆಚ್ಚಿಸುವ ಸಾಧ್ಯತೆ ಇದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಬೆಲೆ ಏರಿಕೆಯ ಹೊಡೆತ ತಪ್ಪಿಸಿಕೊಳ್ಳಲು ಹೋಟೆಲ್, ರೆಸ್ಟೋರೆಂಟ್ಗಳ ಮಾಲೀಕರು ಆಹಾರದ ದರಗಳನ್ನು ಹೆಚ್ಚಿಸಲು ಮುಂದಾಗಿದ್ದಾರೆ. ಕಾಫಿ, ಚಹಾ ಜತೆಗೆ ದೋಸೆ, ಪೂರಿ ಹಾಗೂ ಇತರೆ ತಿನಿಸುಗಳ ತಯಾರಿಕೆಗೆ ಗ್ಯಾಸ್ ಹೆಚ್ಚು ಬೇಕಾಗುತ್ತದೆ. ಹಾಗಾಗಿ ಈ ತಿನಿಸುಗಳ ದರ ₹3 ರಿಂದ ₹6 ರವರೆಗೆ ಏರಿಕೆ ಮಾಡುವ ಸಾಧ್ಯತೆ ಇದೆ.

ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ಮಾತನಾಡಿ, ‘ಎಲ್ಪಿಜಿ ದರ ಹೆಚ್ಚಳದಿಂದ ಆಹಾರ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ದುಬಾರಿ ಹಣ ನೀಡಿ ಸಿಲಿಂಡರ್ ಖರೀದಿಸಿ, ಹೋಟೆಲ್ ಉದ್ಯಮ ನಡೆಸುವುದು ಕಷ್ಟ. ಚುನಾವಣೆ ಮುಗಿಯುತ್ತಿದ್ದಂತೆ ಕೇಂದ್ರ ಸರ್ಕಾರ ದರ ಹೆಚ್ಚಳ ಮೂಲಕ ಆಘಾತ ನೀಡಿದೆ. ಕೂಡಲೇ ಎಲ್ಪಿಜಿ ದರ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದರು.

‘ಎಲ್ಪಿಜಿ ಸಿಲಿಂಡರ್ ಅಭಾವದಿಂದ ಕೆಲ ವಾರಗಳ ಹಿಂದೆಯೇ ಆಹಾರ ದರ ಹೆಚ್ಚಿಸಲಾಗಿದೆ. 19 ಕೆ.ಜಿ. ಸಿಲಿಂಡರ್ಗೆ ಐದು ಸಾವಿರ ರೂಪಾಯಿ ನೀಡಿ ಖರೀದಿಸಿರುವುದು ಉಂಟು. ಇಂತಹ ಪರಿಸ್ಥಿತಿಯಲ್ಲಿ ವ್ಯವಹಾರ ನಡೆಸುವುದೇ ಕಷ್ಟವಾಗಿದೆ’ ಎಂದು ದರ್ಶಿನಿ ಮಾಲೀಕ ಶ್ರೀನಾಥ್ ಭಟ್ ಹೇಳಿದರು.

‘ಯುದ್ಧ ಆರಂಭವಾದಾಗಿನಿಂದ ಅಂದರೆ 60 ದಿನಗಳಲ್ಲಿ ಮೂರು, ನಾಲ್ಕು ಬಾರಿಗೆ ಸಿಲಿಂಡರ್ ದರ ಹೆಚ್ಚಿಸಲಾಗಿದೆ. ಸಿಲಿಂಡರ್ ಅಭಾವದಿಂದ ಹೋಟೆಲ್ ಮಾಲೀಕರು ದುಪ್ಪಟ್ಟು ನೀಡಿ ಎಲ್ಪಿಜಿ ಖರೀದಿಸುತ್ತಿದ್ದಾರೆ. ಇದೇ ರೀತಿ ದರ ಹೆಚ್ಚಳ ಮಾಡುತ್ತಿದ್ದರೆ, ಗ್ಯಾಸ್ ಏಜೆನ್ಸಿಗಳು ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತವೆ. ಈಗಾಗಲೇ ಸಿಲಿಂಡರ್ ಅಭಾವ ಹಾಗೂ ದರ ಹೆಚ್ಚಳ ಕಾರಣ ಹಲವು ಹೋಟೆಲ್, ದರ್ಶಿನಿಗಳು ಬಂದ್ ಆಗಿವೆ’ ಎಂದು ಹೋಟೆಲ್ ಮಾಲೀಕರು ಬೇಸರ ವ್ಯಕ್ತಪಡಿಸಿದರು.
.ವಾಣಿಜ್ಯ ಸಿಲಿಂಡರ್ ಮತ್ತೆ ದುಬಾರಿ: ₹993 ಏರಿಕೆ, ಹೋಟೆಲ್ಗಳಿಗೆ ಭಾರಿ ಹೊರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.