ಭಾನುವಾರ, ಮೇ 9, 2021
25 °C

ಕಮಿಷನರ್ ನೇರಪ್ರಸಾರ ಏ. 17ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬ್ಯಾಟ್‌ ಹಿಡಿದ ಇಂದಿರಾನಗರ ಗೂಂಡಾ’ ವಿರುದ್ಧ ದೂರು ನೀಡಲು ನೀವೆಲ್ಲ ಸಿದ್ಧರಾಗಿದ್ದೀರಾ? ಹೀಗೆಂದು ಕೇಳುತ್ತಿರುವುದು ಬೆಂಗಳೂರು ನಗರ ಪೊಲೀಸರು.

ಕಮಿಷನರ್ ಕಮಲ್ ಪಂತ್ ಅವರು ಏಪ್ರಿಲ್ 17ರಂದು ಬೆಳಿಗ್ಗೆ 11ರಿಂದ 12 ಗಂಟೆವರೆಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ‘ಬೆಂಗಳೂರು ಸಿಟಿ ಪೊಲೀಸ್’ ಖಾತೆಯಲ್ಲಿ ನೇರಪ್ರಸಾರದಲ್ಲಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಪ್ರಚಾರಕ್ಕಾಗಿ ಪೊಲೀಸರು, ಇತ್ತೀಚೆಗೆ ಹೆಚ್ಚು ಸುದ್ದಿಯಾದ ರಾಹುಲ್ ದ್ರಾವಿಡ್‌ ಕಾಣಿಸಿಕೊಂಡಿದ್ದ ಜಾಹೀರಾತು ಬಳಸಿಕೊಳ್ಳುತ್ತಿದ್ದಾರೆ.

ಬ್ಯಾಟ್ ಹಿಡಿದಿರುವ ರಾಹುಲ್ ದ್ರಾವಿಡ್ ಫೋಟೊ ಸಮೇತ ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ  ಪೋಸ್ಟ್‌ ಹಾಕಿರುವ ಪೊಲೀಸರು, ‘ಸುತ್ತಮುತ್ತಲು ನಡೆಯುವ ಕೃತ್ಯಗಳ ಬಗ್ಗೆ ಹಾಗೂ ಪೊಲೀಸ್ ವ್ಯವಸ್ಥೆ ಬಗ್ಗೆ ಏನಾದರೂ ಸಮಸ್ಯೆಗಳು ಇದ್ದರೆ ಕಮಿಷನರ್ ಜೊತೆ ಮಾತನಾಡಬಹುದು. ನಿಮ್ಮ ಪ್ರಶ್ನೆಗಳಿಗೆ ಕಮಿಷನರ್ ಉತ್ತರಿಸಲಿದ್ದಾರೆ’ ಎಂದು ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.