ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಕುಡುಂಬಗಳ ನಡುವಿನ ಹಾಕಿ ಟೂರ್ನಿ

Last Updated 14 ಮೇ 2018, 10:41 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡವ ಕುಟುಂಬಗಳ ನಡುವೆ ಇಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ನೆಲ್ಲಮಕ್ಕಡ, ಅಂಜಪರುವಂಡ, ಚಕ್ಕೇರ, ಐನಂಡ, ಮುರು ವಂಡ, ಸುಳ್ಳೀಮಡ, ಪಳಂಗಂಡ, ಮಂಡೇಪಂಡ, ಕೋಂಗಂಡ, ಚೇಪ್ಪುಡೀರ, ತಂಡಗಳು ಮುಂದಿನ ಹಂತಕ್ಕೆ ಪ್ರವೆಶವನ್ನು ಪಡೆದು ಕೊಂಡಿವೆ.

ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ನೆಲ್ಲಮಕ್ಕಡ ತಂಡವು ಕಂಬೀರಂಡ ತಂಡವನ್ನು 2-0 ಗೋಲುಗಳಿಂದ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತು, ಪ್ರಾರಂಭದಲ್ಲಯೇ ಬಿರುಸಿನ ಪ್ರದರ್ಶನಕ್ಕಿಳಿದ ನೆಲ್ಲಮಕ್ಕಡ ತಂಡದ ನಾಣಯ್ಯ 1, ಮತ್ತು ಮೊಣ್ಣಪ್ಪ 1, ಗೋಲುಗಳಿಸುವುದರ ಮೂಲಕ ತಂಡದ ಗೆಲುವಿಗೆ ಕಾರಣರಾದರು.

2ನೇ ಪಂದ್ಯದಲ್ಲಿ ಚಾಂಪಿಯನ್ ಅಂಜಪರುವಂಡ ತಂಡವು ಕಡೇಮಾಡ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಅಂಜಪರುವಂಡ ತಂಡದ ಆಟಗಾರರಾದ ಅಭಿನ್ ಚೆಟ್ಟಿಯಪ್ಪ, ಹೇಮಂತ್ ದೇವಯ್ಯ ತಲಾ ಒಂದು ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಮೂರನೇ ಪಂದ್ಯದಲ್ಲಿ ಮುಳುವಂಡ ತಂಡವು ಟೈಬ್ರೇಕರ್‌ಬಕ್ಕು ಅರೆಯಡ ತಂಡವನ್ನು ಸೋಲಿಸಿತು.

ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಒಂದೊಂದು ಗೋಲುಗಳ ಸಮಬಲ ಸಾಧಿಸಿದವು. ನಂತರ ಟೈಬ್ರೇಕರ್‍ನಲ್ಲಿ ಮುರುವಂಡ 4-3 ಗೋಲುಗಳಿಂದ ವಿಜಯ ಸಾಧಿಸಿತು.

ನಂತರದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಪಳಂಗಂಡ ತಂಡವು ಕಳ್ಳೇಂಗಡ ತಂಡವನ್ನು 3-1 ಗೋಲು ಗಳಿಂದ ಸುಲಭವಾಗಿ ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT