ಸೋಮವಾರ, ಏಪ್ರಿಲ್ 12, 2021
29 °C

ಬೆಂಗಳೂರು: ಸಾವಯವ ಗೊಬ್ಬರ ಉಚಿತ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಸ ಸಂಸ್ಕರಣಾ ಘಟಕಗಳಲ್ಲಿರುವ ಸಾವಯವ ಗೊಬ್ಬರವನ್ನು ರೈತರು ಉಚಿತವಾಗಿ ಕೊಂಡೊಯ್ಯಲು ಬಿಬಿಎಂಪಿ ಅವಕಾಶ ಕಲ್ಪಿಸಿದೆ.

ಬಿಬಿಎಂಪಿಯ ಏಳು ಕಸ ಸಂಸ್ಕರಣಾ ಘಟಕಗಳಲ್ಲಿ ನಿತ್ಯವೂ ಹಸಿ-ಕಸವನ್ನು ವಿಂಡ್‌ ರೋ ವಿಧಾನದಲ್ಲಿ ಸಂಸ್ಕರಿಸಲಾಗುತ್ತದೆ. ಅದನ್ನು 35 ಮಿ.ಮೀ ಹಾಗೂ 16 ಮಿ.ಮೀ ಗಾತ್ರದ ರಂಧ್ರಗಳಿರುವ ಯಂತ್ರಗಳಲ್ಲಿ ಜರಡಿಯಾಡಲಾಗುತ್ತದೆ. ಉಪ ಉತ್ಪನ್ನವಾಗಿ ಲಭಿಸುವ ಎರಡನೇ ದರ್ಜೆಯ ಕಾಂಪೋಸ್ಟ್ ಅನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ.

‘ರೈತರು ಈ ಉಪ ಉತ್ಪನ್ನವನ್ನು ತೆಂಗು, ಅಡಿಕೆ, ಮಾವು, ಸೀಬೆ, ದಾಳಿಂಬೆ ಮತ್ತು ಇನ್ನಿತರೆ ತೋಟಗಾರಿಕೆ ಬೆಳೆಗಳಿಗೆ ಗೊಬ್ಬರವಾಗಿ ಬಳಸಬಹುದು. ಇದರ ಬಳಕೆಯಿಂದ ನೆಲದ ಫಲವತ್ತತೆ ಹೆಚ್ಚಲಿದೆ’ ಎನ್ನುತ್ತಾರೆ ತಜ್ಞರು. 

ದೊಡ್ಡಬಿದಿರಕಲ್ಲಿನ ಕಸ ಸಂಸ್ಕರಣಾ ಘಟಕದಿಂದ ರೈತರು ಉಚಿತವಗಿ ಈ ಗೊಬ್ಬರವನ್ನು ಕೊಂಡೊಯ್ಯಬಹುದು ಎಂದು ದಾಸರಹಳ್ಳಿ ವಲಯದ ಜಂಟಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕ: 8618001636

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.