ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಕೃಷಿ ನಿರ್ವಹಣೆ ಪದ್ಧತಿಯಿಂದ ಪರಿಹಾರ: ಡಾ.ಸಿ.ಪಿ.ಮಂಜುಳ

Last Updated 3 ಜನವರಿ 2023, 20:55 IST
ಅಕ್ಷರ ಗಾತ್ರ

ಯಲಹಂಕ: ರೈತರು ಬೆಳೆಗಳನ್ನು ಬೆಳೆಯುವ ಸಂದರ್ಭದಲ್ಲಿ ರೋಗ ಮತ್ತು ಕೀಟಗಳ ಬಾಧೆಯು ಸಾಮಾನ್ಯ ಸಮಸ್ಯೆಯಾಗಿದ್ದು, ಇತ್ತೀಚೆಗೆ ಇದು ಹೆಚ್ಚಾಗಿದೆ. ರೈತರು ಹೆಚ್ಚಿನ ನಷ್ಟ ಅನುಭವಿಸುತ್ತಿದ್ದಾರೆ. ಸಮಗ್ರ ಕೃಷಿ ನಿರ್ವಹಣೆ ಪದ್ಧತಿ ಅನುಸರಿಸಿದರೆ ಪರಿಹಾರ ದೊರೆಯಲಿದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಸಿ.ಪಿ.ಮಂಜುಳ ಹೇಳಿದರು.

ಕೃಷಿ ಇಲಾಖೆ, ತಾಲ್ಲೂಕು ಕೃಷಿಕ ಸಮಾಜ ಹಾಗೂ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಯುವಕ ರೈತಘಟಕದ ಸಹಯೋಗದಲ್ಲಿ ಯಶೋದ ನಗರದ ಸಹಾಯಕ ಕೃಷಿ ನಿರ್ದೇಶಕ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಹಿಂದೆ ಪಕ್ಷಿಗಳು ಕೀಟಗಳನ್ನು ತಿನ್ನುತ್ತಿದ್ದವು. ಕೊಟ್ಟಿಗೆ ಗೊಬ್ಬರ ಬಳಕೆ, ಬೂದಿ ಎರಚುವ ಪದ್ಧತಿಗ
ಳನ್ನು ಕೃಷಿಯಲ್ಲಿ ಅನುಸರಿಸಲಾಗುತ್ತಿತ್ತು. ಆದರೆ, ಇಂದು ಕೇವಲ ಕೀಟನಾಶಕಗಳಿಗಷ್ಟೇ ಸೀಮಿತರಾಗಿದ್ದೇವೆ. ಇದರ ಪರಿಣಾಮ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಹಳೆಯ ಪದ್ಧತಿಗಳ ಜೊತೆಗೆ ಕೀಟನಾಶಕಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸುವುದರಿಂದ ಮಣ್ಣಿನ ಆರೋಗ್ಯ ಫಲವತ್ತಾಗಿರುವುದರ ಜೊತೆಗೆ ಔಷಧಿಗಳಿಗೆ ತಗಲುವ ವೆಚ್ಚವೂ ಕಡಿಮೆಯಾಗಿ ಮನುಷ್ಯನ ಆರೋಗ್ಯ ಉತ್ತಮವಾಗಲಿದೆ’ ಎಂದು ತಿಳಿಸಿದರು.ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನಿ ಡಾ.ಜಿ.ಜಿ.ಕಾದಳ್ಳಿ, ಮಣ್ಣಿನ ಗುಣ-ವಿಶೇಷತೆಗಳು, ಮಹತ್ವ ಮತ್ತು ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.

ಪ್ರಶಸ್ತಿ: ಆತ್ಮ ಯೋಜನೆ ಅಡಿಯಲ್ಲಿ 8 ಮಂದಿ ಹಾಗೂ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಯುವಕ ರೈತಘಟಕದ ವತಿಯಿಂದ 3 ಮಂದಿ ಪ್ರಗತಿಪರ ರೈತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT