ಸೋಮವಾರ, ಮಾರ್ಚ್ 27, 2023
21 °C
ಕರ್ನಾಟಕ ಲೇಖಕಿಯರ ಸಂಘ ಆಯೋಜನೆ

ಇಂದು ಗಡಿನಾಡು ಪ್ರದೇಶದ ಲೇಖಕಿಯರ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಲೇಖಕಿಯರ ಸಂಘವು ಶೇಷಾದ್ರಿಪುರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಗಡಿನಾಡು ಪ್ರದೇಶದ ಲೇಖಕಿಯರ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಹಮ್ಮಿಕೊಂಡಿದೆ. 

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಆಶಯ ಭಾಷಣ ಮಾಡಲಿದ್ದಾರೆ. ಶೇಷಾದ್ರಿಪುರಂ ಶಿಕ್ಷಣ ದತ್ತಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ಉಪಸ್ಥಿತರಿರಲಿದ್ದಾರೆ. 

‘ಗಡಿನಾಡ ಸಾಹಿತ್ಯ ಹಾಗೂ ಭಾಷಾ ಬಾಂಧವ್ಯ’ ಎಂಬ ಶೀರ್ಷಿಕೆಯಡಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ವಿಮರ್ಶಕಿ ಎಂ.ಎಸ್. ಆಶಾದೇವಿ ಅಧ್ಯಕ್ಷತೆ ವಹಿಸಲಿದ್ದಾರೆ. ‘ಶಿಕ್ಷಣ ಕ್ಷೇತ್ರದಲ್ಲಿ ಭಾಷಾ ಬೋಧನೆ’ ವಿಷಯದ ಬಗ್ಗೆ ಪ್ರಾಧ್ಯಾಪಕಿ ಮೈತ್ರೇಯಿಣಿ ಗದಿಗೆಪ್ಪಗೌಡರ, ‘ಭಾಷಾ ಬಾಂಧವ್ಯದ ಶಕ್ತಿ ಹಾಗೂ ಸವಾಲುಗಳು’ ವಿಷಯದ ಬಗ್ಗೆ ಲೇಖಕಿ ವೆಂಕಮ್ಮ ಎನ್.ಡಿ., ‘ಗಡಿನಾಡಿನ ಸಾಹಿತ್ಯ ಮತ್ತು ರಂಗಭೂಮಿ’ ವಿಷಯದ ಬಗ್ಗೆ ಪ್ರಾಧ್ಯಾಪಕಿ ಸುಜಾತಾ ಜಂಗಮಶೆಟ್ಟಿ ಹಾಗೂ ‘ಗಡಿನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳು’ ವಿಷಯದ ಬಗ್ಗೆ ನಿವೃತ್ತ ಪ್ರಾಧ್ಯಾಪಕಿ ಜಯಲಕ್ಷ್ಮೀ ಕಾರಂತ ಮಾತನಾಡಲಿದ್ದಾರೆ. 

ಕವಯಿತ್ರಿ ಸುಕನ್ಯಾ ಮಾರುತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ದೂರದರ್ಶನ ಕೇಂದ್ರದ ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ನಿರ್ಮಲಾ ಸಿ. ಎಲಿಗಾರ ಅವರು ಆಶಯ ನುಡಿಯಾಡಲಿದ್ದಾರೆ. ಕವಯಿತ್ರಿಯರಾದ ಜ್ಯೋತಿ ಬದಾಮಿ, ವಸುಂಧರಾ ಕದಲೂರು, ಮಧುಪಾಂಡೆ ಮಾನ್ವಿ, ಸುಮಾ ಆನಂದರಾವ್, ಗೀತಾ ಡಿ.ಸಿ., ಅಸೀಫಾ ಬೇಗಂ, ದೀಪದಮಲ್ಲಿ, ಅಂಜಲಿ ಬೆಳಗಲ್, ಸೌಮ್ಯಾ ಕೆ.ಆರ್., ಚೈತ್ರ ಶಿವಯೋಗಿಮಠ, ಮಂಜುಳಾ ಎನ್. ಸರ್ಜಾಪುರ ಹಾಗೂ ಸೌಮ್ಯಾ ಪ್ರವೀಣ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು