ಮಂಗಳವಾರ, ಜನವರಿ 21, 2020
27 °C

ಎರಡು ದಿನಗಳ ಹಿಂದೆ ಬಿಜೆಪಿ ಸೇರಿದ್ದ ಪಾಲಿಕೆ ಸದಸ್ಯ ಮತದಾನದ ದಿನ ಕಾಂಗ್ರೆಸ್‌ಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಿಬಿಎಂಪಿ ಸದಸ್ಯ ವಸಂತ ಕುಮಾರ್, ವಿಧಾನಸಭೆಗೆ ಮತ ದಾನ ಪ್ರಕ್ರಿಯೆ ಆರಂಭವಾದ ಕೆಲವೇ ಹೊತ್ತಿನಲ್ಲಿ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ.

ಕಾಂಗ್ರೆಸ್‌ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಗುರುವಾರ ಪಕ್ಷಕ್ಕೆ ಸೇರ್ಪಡೆಯಾದರು. ಉಪಚುನಾವಣೆ ನಡೆಯುತ್ತಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸಂಪಂಗಿ ರಾಮನಗರ ವಾರ್ಡ್‌ನಿಂದ ಆಯ್ಕೆ ಆಗಿದ್ದರು. ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಬೀಳುವ ಸಮಯದಲ್ಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.

‘ಚಹಾ ಕುಡಿದು ಬರೋಣವೆಂದು ಕೆಲವು ಬಿಜೆಪಿ ಮುಖಂಡರು ನನ್ನನ್ನು ಕರೆದುಕೊಂಡು ಹೋದರು. ಇದ್ದಕ್ಕಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದೆ ನಿಲ್ಲಿಸಿ, ಬಿಜೆಪಿ ಸೇರ್ಪಡೆಯಾಗಿರುವುದಾಗಿ ಹೇಳಿಕೆ ಕೊಡಿಸಿದರು. ಆ ಸಮಯದಲ್ಲಿ ನನಗೆ ಏನು ಮಾಡಬೇಕು ಎಂಬುದು ಗೊತ್ತಾಗಲಿಲ್ಲ. ಆನಂತರ ಬೇಜಾರಾಗಿದ್ದು, ಪಕ್ಷಕ್ಕೆ ನನ್ನಿಂದ ಈ ರೀತಿ ಮೋಸವಾಯಿತಲ್ಲ ಎನಿಸಿತು. ಅದಕ್ಕಾಗಿ ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಇಲ್ಲೇ ಇದ್ದು ಕೆಲಸ ಮಾಡುತ್ತೇನೆ’ ಎಂದು ವಸಂತ ಕುಮಾರ್ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು