ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಟ್ಟಂಗಿಗಳಿಗೆ ಅವಕಾಶ’, ಅಕಾಡೆಮಿಗಳ ನೇಮಕಾತಿ ಟೀಕಿಸಿದ ಕಾಂಗ್ರೆಸ್

Last Updated 18 ಅಕ್ಟೋಬರ್ 2019, 9:29 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರದ ಅಕಾಡೆಮಿಗಳ ನೇಮಕಾತಿ ನೋಡಿದರೆ ಬಹುತೇಕರ ಆಯ್ಕೆಯು
ಭಟ್ಟಂಗಿಗಳಿಗೆ ನೀಡಿದ ಸಮಾಧಾನಕರ ಬಹುಮಾನದಂತಿದೆ’ ಎಂದು ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಟೀಕಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 15 ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಮಂಗಳವಾರ ಪ್ರಕಟಿಸಿತ್ತು. ಈ ಪಟ್ಟಿ ಇದೀಗ ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ.

‘ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಸಂದರ್ಭಸಾಮಾಜಿಕ ನ್ಯಾಯ, ಭೌಗೋಳಿಕ ನ್ಯಾಯ ಪಾಲಿಸಿಲ್ಲ. ನೇಮಕಕ್ಕೆ ಸಂಘ ಪರಿವಾರದ ಹಿನ್ನೆಲೆಯನ್ನು ಮಾತ್ರ ಪರಿಗಣಿಸಿದಂತಿದ್ದು; ಜ್ಞಾನ, ಅನುಭವ, ಕ್ಷಮತೆ, ಕೌಶಲ್ಯತೆ ಮತ್ತುಹಿರಿತನವನ್ನು ಕಡೆಗಣಿಸಿದಂತಿದೆ’ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

ಕಾಂಗ್ರೆಸ್‌ನ ಟೀಕೆಗೆ ಅದರ ಟ್ವಿಟರ್‌ ಪುಟದಲ್ಲಿಯೇ ತಿರುಗೇಟು ನೀಡಿರುವ ಕೆಲವರು, ‘ನಿಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಎಂಥವರಿಗೆ ಅವಕಾಶ ಕೊಟ್ಟಿದ್ದಿರಿ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT