ಚುನಾವಣೆಯಲ್ಲಿ ಗಂಡಸರು ಸೋಲುವುದಿಲ್ಲವೇ?

7
ಶಾಸಕಿಯರ ಸನ್ಮಾನ ಕಾರ್ಯಕ್ರಮದಲ್ಲಿ ರಾಣಿ ಸತೀಶ್‌ ಪ್ರಶ್ನೆ

ಚುನಾವಣೆಯಲ್ಲಿ ಗಂಡಸರು ಸೋಲುವುದಿಲ್ಲವೇ?

Published:
Updated:

ಬೆಂಗಳೂರು: ‘ಚುನಾವಣೆಯಲ್ಲಿ ಮಹಿಳೆಯರು ಗೆಲ್ಲುವುದಿಲ್ಲ ಎಂಬ ನೆಪ ಹೇಳಿ ಟಿಕೆಟ್‌ ನಿರಾಕರಿಸಲಾಗುತ್ತಿದೆ. ಹಾಗಿದ್ದರೆ, ಗಂಡಸರು ಚುನಾವಣೆಯಲ್ಲಿ ಸೋಲುವುದಿಲ್ಲವೇ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರಾದ ರಾಣಿ ಸತೀಶ್‌ ಪ್ರಶ್ನಿಸಿದರು.

ಕೆಪಿಸಿಸಿ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇನ್ನು ಮುಂದಿನ ದಿನಗಳಲ್ಲಿ ಮಹಿಳೆಯರಿಗೂ ಹೆಚ್ಚಿನ ಅವಕಾಶ ಕೊಡಬೇಕು. ಒಬ್ಬ ಯುವ ಅಧ್ಯಕ್ಷರಾಗಿ ನೀವು ಈ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಮನವಿ ಮಾಡಿದರು.

ಶಾಸಕಿ ಸೌಮ್ಯಾ ರೆಡ್ಡಿ, ‘ನನ್ನ ತಂದೆ ರಾಜಕಾರಣಿ ಆಗಿಲ್ಲ ಅಂದಿದ್ದರೆ ನನಗೂ ಈ ಅವಕಾಶ ಸಿಗುತ್ತಿರಲಿಲ್ಲವೇನೋ. ಹೆಣ್ಣು ಮಕ್ಕಳಿಗೆ ಹೆಣ್ಣುಮಕ್ಕಳೇ ವಿರೋಧಿಗಳು. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಗೆದ್ದಿರುವ ಏಕೈಕ ಮಹಿಳೆ ನಾನು’ ಎಂದರು.

ಮೋಟಮ್ಮ, ‘ಮಹಿಳೆಯರಲ್ಲಿ ಹಿಂದುತ್ವದ ವಿಷಬೀಜ ಬಿತ್ತುತ್ತಿರುವ ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಬೇಕು’ ಎಂದರು.

ಹೆಬ್ಬಾಳಕರ ಹೊಗಳಿದ ದಿನೇಶ್‌
ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೊಗಳಿದರು.

‘ಲಕ್ಷ್ಮಿ ಅವರು ಎರಡು ಸಲ ಚುನಾವಣೆಯಲ್ಲಿ ಸೋತಿದ್ದರು. ಆದರೆ, ಈ ಸಲ ಪಟ್ಟು ಬಿಡದೆ ಹೋರಾಟ ನಡೆಸಿ 50 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ’ ಎಂದರು. ‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 20 ವರ್ಷಗಳಿಂದ ಕಾಂಗ್ರೆಸ್‌ ಗೆದ್ದಿರಲಿಲ್ಲ. ಆದರೆ, ಹೆಬ್ಬಾಳಕರ ಅವರು ಅಸಾಧ್ಯವಾಗಿರುವುದನ್ನು ಸಾಧ್ಯವಾಗಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳಗಾವಿ ತಾಲ್ಲೂಕಿನ ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕರ ಚುನಾವಣೆ ಹಿನ್ನೆಲೆಯಲ್ಲಿ ಹೆಬ್ಬಾಳಕರ ಅವರು ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ.

*
ಹಬ್ಬದ ನೆಪದಲ್ಲಿ ಬಿಜೆಪಿಯ ಮಹಿಳಾ ಘಟಕದವರು ಮಹಿಳೆಯರಿಗೆ ಅರಶಿನ – ಕುಂಕುಮ ನೀಡುತ್ತಾರೆ. ನಾವು ಸಹ ಅದೇ ರೀತಿ ಮಾಡಬೇಕು.
ಮೋಟಮ್ಮ , ಕಾಂಗ್ರೆಸ್‌ ನಾಯಕಿ

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 1

  Sad
 • 2

  Frustrated
 • 5

  Angry

Comments:

0 comments

Write the first review for this !