ಗುರುವಾರ , ನವೆಂಬರ್ 26, 2020
22 °C
ಆರೋಪಗಳ ನಡುವೆ ಭಾವನೆಗಳ ನುಡಿಮುತ್ತು– ‘ಕೈ’ ನಾಯಕರ ಅಸ್ತ್ರ

ಆರ್‌.ಆರ್‌.ನಗರ ಉಪ ಚುನಾವಣೆ; ಮತದಾರರ ಮನಗೆಲ್ಲಲು ನಾನಾ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ, ಮಹಿಳೆಯರಿಗೆ ಕಿರುಕುಳ, ನಿಮ್ಮ ಮತ ಮಾರಾಟ, ಮಾತೃ ಪಕ್ಷಕ್ಕೆ ದ್ರೋಹದಂಥ ಅಧರ್ಮವನ್ನು ಮಣಿಸಲು, ನಿಮ್ಮ ಸೇವೆಗೆ ಪ್ರಾಮಾಣಿಕವಾಗಿ ಧರ್ಮ ಪಾಲಿಸುತ್ತಿರುವ ಕುಸುಮಾ ಅವರಿಗೆ ಮತ ನೀಡಿ' ಎಂದು ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತದಾರರಲ್ಲಿ ಮನವಿ ಮಾಡಿದರು.

ರಾಜರಾಜೇಶ್ವರಿನಗರ ಕ್ಷೇತ್ರದ ವಿವಿಧೆಡೆ ಸೋಮವಾರ ಪ್ರಚಾರ ನಡೆಸಿದ ಅವರು, ‘ಕ್ಷೇತ್ರ ವ್ಯಾಪ್ತಿಯ ಮಹಿಳಾ ಕಾರ್ಪೊರೇಟರ್‌ಗಳು ಕಣ್ಣೀರಿಡಲು ಕಾರಣರಾದವರಿಗೆ ಮತ ಹಾಕಬೇಕಾ? ಸಂಸಾರಸ್ಥರು, ಮರ್ಯಾದಸ್ಥರು ಹೆಣ್ಣನ್ನು ಗೌರವಿಸುತ್ತಾರೆ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ಅನಿಷ್ಟ ರಾಜಕಾರಣಿಯಿಂದ ಮುಕ್ತಿ ಕೊಡಿಸಬೇಕಿದೆ’ ಎಂದು ಹೇಳಿದರು.

ಕ್ಷೇತ್ರದಲ್ಲಿ ವಾಸವಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಮೂಲನಿವಾಸಿಗಳ ಸಭೆಯಲ್ಲಿ ಮಾತನಾಡಿದ ಶಿವಕುಮಾರ್, ‘ಬೆಂಗಳೂರಿನಲ್ಲಿ ಮಹಿಳೆಯರ ಪ್ರಮಾಣ ಶೇ 52ರಷ್ಟಿದೆ. ಭವಿಷ್ಯದ ರಾಜಕೀಯದಲ್ಲಿ ಪ್ರಜ್ಞಾವಂತ ಹೆಣ್ಣು ಮಕ್ಕಳಿರಬೇಕು. ಹೀಗಾಗಿ, ಬುದ್ಧಿವಂತ, ಪ್ರಜ್ಞಾವಂತ, ಸ್ವಾಭಿಮಾನಿ ಹೆಣ್ಣನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ’ ಎಂದರು.

ಚನ್ನಸಂದ್ರ, ಬೆಮೆಲ್‍ಲೇಔಟ್, ಹಲಗೇವಡೇರಹಳ್ಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌.ಮತಯಾಚನೆ ಮಾಡಿದರು. ಮತ್ತಿಕೆರೆ, ಜೆಪಿ ಪಾರ್ಕ್ ವಾರ್ಡ್ ವ್ಯಾಪ್ತಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತಯಾಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು