ಬೆಂಗಳೂರು: ‘ಸೇವಾ ಕ್ಷೇತ್ರವಾಗಿದ್ದ ಶಿಕ್ಷಣ ಹಾಗೂ ಆರೋಗ್ಯ ಈಗ ಉದ್ಯಮವಾಗಿ ಮಾರ್ಪಾಡಾಗಿದೆ. ನಿರಂತರ ಆದಾಯಕ್ಕಾಗಿ ನಮ್ಮ ಜನಪ್ರತಿನಿಧಿಗಳೇ ಇವುಗಳನ್ನು ನಡೆಸುತ್ತಿದ್ದಾರೆ’ ಎಂದು ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಬೇಸರ ವ್ಯಕ್ತಪಡಿಸಿದರು.

ಭಾರತೀಯ ವಿದ್ಯಾ ಭವನ ಹಾಗೂ ವಿನಾಯಕ ಗೋಕಾಕ್ ವಾಂಙ್ಮಯ ಟ್ರಸ್ಟ್ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರಿಗೆ ‘ವಿ.ಕೃ.ಗೋಕಾಕ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ₹25 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ.

ಈ ವೇಳೆ ಮಾತನಾಡಿದ ಟ್ರಸ್ಟ್ನ ಅಧ್ಯಕ್ಷರೂ ಆಗಿರುವ ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಬ್ರಿಟಿಷರು ಭಾರತಕ್ಕೆ ಬಂದಾಗ ನಮ್ಮ ಮೇಲೆ ರಾಜಕೀಯವಾಗಿ ಮಾತ್ರ ಆಕ್ರಮಣ ಮಾಡದೆ, ಸಾಂಸ್ಕೃತಿಕವಾಗಿಯೂ ಆಕ್ರಮಣ ಮಾಡಿದರು. ಹೀಗೆ ಆಕ್ರಮಣ ಮಾಡಲು ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡರು. ಸ್ವಾತಂತ್ರ್ಯಾ ನಂತರವೂ ಅತ್ಯುತ್ತಮ ಆಸ್ಪತ್ರೆ, ಶಿಕ್ಷಣ ಕೇಂದ್ರಗಳು ಬಂಡವಾಳಶಾಹಿಗಳ ಪಾಲಾಗಿವೆ. ಜನಪ್ರತಿನಿಧಿಗಳೇ ಶಾಲೆ, ಕಾಲೇಜು, ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಇವು ಆದಾಯದ ಮೂಲವಾಗಿ ಮಾರ್ಪಡುತ್ತಿವೆ’ ಎಂದರು.

‘ಸಾಂಸ್ಕೃತಿಕ ಟ್ರಸ್ಟ್ಗಳು ಆರ್ಥಿಕ ಬಲವಿಲ್ಲದಂತಾಗಿವೆ. ಗ್ರಂಥಾಲಯ ಕರ ₹ 500 ಕೋಟಿಯಷ್ಟಿದೆ. ಆದರೆ, ಸರ್ಕಾರ ಈ ಹಣವನ್ನು ಗ್ರಂಥಾಲಯಗಳಿಗೆ ಪುಸ್ತಕಗಳ ಖರೀದಿಗೆ ನೀಡದೆ, ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ. ಸರ್ಕಾರದ ಗಮನ, ಆಸಕ್ತಿ ಬೇರೆ ಕಡೆಗೆ ಸಾಗಿದೆ. ಜನರೇ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ‘ವಿ.ಕೃ. ಗೋಕಾಕ್ ಅವರು ಕನ್ನಡ ಭಾಷೆಗೆ ನೀಡಿದ ಕೊಡುಗೆ ಅನನ್ಯ. ಅವರಿಂದಲೇ ಭಾಷೆಯ ಜಾಗೃತಿ ಆಗಿದೆ. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿರುವ ಈ ಹೊತ್ತಿನಲ್ಲಿ ಶಾಲೆಗಳ ಉಳಿವಿಗೆ ಜಾಗೃತಿ ಆಂದೋಲನ ನಡೆಯಬೇಕಿದೆ. ಈ ಶಾಲೆಗಳಿಗೆ ಮಕ್ಕಳು ಏಕೆ ಹೋಗುತ್ತಿಲ್ಲ ಎನ್ನುವುದರ ಬಗ್ಗೆ ಚಿಂತನೆಯನ್ನೂ ನಡೆಸಬೇಕಿದೆ’ ಎಂದು ಹೇಳಿದರು.

‘ವೇದ–ಉಪನಿಷತ್ತುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆಯೇ ಅವನ್ನು ತಪ್ಪಾಗಿ ವ್ಯಾಖ್ಯಾನ ಮಾಡುತ್ತಿದ್ದೇವೆ. ಅವುಗಳಲ್ಲಿ ಮೌಲ್ಯಗಳು ಹಾಸು ಹೊಕ್ಕಾಗಿದ್ದು, ಆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು’ ಎಂದರು.

ಗುರುರಾಜ ಕರಜಗಿ, ‘ಗೋಕಾಕ್ ಅವರು ಆಕಾರ ಮತ್ತು ಸಾಧನೆಯಿಂದ ಎತ್ತರದ ಸ್ಥಾನದಲ್ಲಿದ್ದಾರೆ. ಅವರ ಹೆಸರಿನ ಪ್ರಶಸ್ತಿ ಪಡೆದಿರುವುದು ಸಂತೋಷವನ್ನುಂಟು ಮಾಡಿದೆ. ಇನ್ನೊಂದು ಜನ್ಮವಿದ್ದರೂ ನಾನು ಮೇಷ್ಟ್ರು ಆಗಿಯೇ ಕೆಲಸ ಮಾಡಬೇಕು ಅಂತ ಬಯಸುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.