ಶನಿವಾರ, ಜನವರಿ 25, 2020
28 °C

ಸೆಂಟ್ರಲ್‌ ಲ್ಯಾಬ್‌ನಿಂದ ಸಮಾಲೋಚನಾ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸೆಂಟ್ರಲ್‌ ಲ್ಯಾಬ್‌ ನಗರದ ರಿಚ್‌ಮಂಡ್‌ ವೃತ್ತದ ಬಳಿ ಆರಂಭಿಸಿರುವ ನೂತನ ಹೈಟೆಕ್‌ ಡಯಾಗ್ನಾಸ್ಟಿಕ್ ಹಾಗೂ ಮಲ್ಟಿ ಸ್ಪೆಷಾಲಿಟಿ ಸಮಾಲೋಚನಾ ಕೇಂದ್ರವನ್ನು ಹೃದಯ ತಜ್ಞ ಡಾ.ಎಸ್‌.ಸಿ.ಶರ್ಮಾ ಭಾನುವಾರ ಉದ್ಘಾಟಿಸಿದರು. 

ಸೆಂಟ್ರಲ್‌ ಲ್ಯಾಬ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್‌.ಪಿ.ಗಣೇಸನ್‌,‘ರೋಗನಿವಾರಣೆಯಲ್ಲಿ ಲ್ಯಾಬ್‌ ಸೇವೆಗಳ ಪಾತ್ರ ಮಹತ್ವದ್ದು. ಆಧುನಿಕ ಚಿಕಿತ್ಸೆ ಹಾಗೂ ಸ್ಪಷ್ಟ ರೋಗನಿರ್ಣಯಕ್ಕೆ ಲ್ಯಾಬ್‌ಗಳು ವೈದ್ಯರಿಗೆ ನೆರವಾಗುತ್ತವೆ’ ಎಂದರು.

‘ಬಡರೋಗಿಗಳಿಗೆ ಕೈಗೆಟ ಕುವ ದರದಲ್ಲಿ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ತೆರೆಯಲಾಗಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಲ್ಯಾಬ್ ಇದಾಗಿದೆ. ಇಲ್ಲಿ ಟ್ರೆಡ್‌ಮಿಲ್‌ ಟೆಸ್ಟ್‌ (ಟಿಎಂಟಿ), ಎಲೆಕ್ಟ್ರೊ ಕಾರ್ಡಿಯೊಗ್ರಾಂ (ಇಸಿಜಿ), ಡಿಜಿಟಲ್‌ ಎಕ್ಸ್‌ರೇ, ಬೋನ್‌ ಡೆಕ್ಸಾ, ಪಲ್ಮನರಿ ಫಂಕ್ಷನ್ ಟೆಸ್ಟ್‌ (ಪಿಎಫ್‌ಟಿ), ಎಂಡೊಸ್ಕೋಪಿ, ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್ ಸೌಲಭ್ಯಗಳು ಲಭ್ಯ’ ಎಂದು ಮಾಹಿತಿ ನೀಡಿದರು.

ಸೆಂಟ್ರಲ್‌ ಲ್ಯಾಬ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್‌.ಆನಂದ್‌, ಉಪಾಧ್ಯಕ್ಷ ಡಾ.ಸುರೇಶ್‌ ಹಾಗೂ ಸಿಬ್ಬಂದಿ ಅಶ್ವಿನ್‌ ಇದ್ದರು.

ಪ್ರತಿಕ್ರಿಯಿಸಿ (+)