ಕಳಪೆ ಕಾಮಗಾರಿ: ಗುತ್ತಿಗೆದಾರಗೆ ₹ 1 ಲಕ್ಷ ದಂಡ ವಿಧಿಸಿದ ಮೇಯರ್ ಗಂಗಾಬಿಕೆ

7

ಕಳಪೆ ಕಾಮಗಾರಿ: ಗುತ್ತಿಗೆದಾರಗೆ ₹ 1 ಲಕ್ಷ ದಂಡ ವಿಧಿಸಿದ ಮೇಯರ್ ಗಂಗಾಬಿಕೆ

Published:
Updated:

ಬೆಂಗಳೂರು: ಜಯಮಹಲ್‌ ಮುಖ್ಯರಸ್ತೆಯ ಮೇಲ್ಮೈಯನ್ನು ಸಮತಟ್ಟುಗೊಳಿಸುವ ಕೆಲಸವನ್ನು ಸಮರ್ಪಕವಾಗಿ ನಡೆಸದ ಗುತ್ತಿಗೆದಾರರೊಬ್ಬರಿಗೆ ಮೇಯರ್‌ ಗಂಗಾಂಬಿಕೆ ಸೂಚನೆ ಮೇರೆಗೆ ಪಾಲಿಕೆ ₹ 1 ಲಕ್ಷ ದಂಡ ವಿಧಿಸಿದೆ.

ಮೇಯರ್‌ ಅವರು ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು  ಮಂಗಳವಾರ ರಾತ್ರಿ ಪರಿಶೀಲನೆ ನಡೆಸಿದ್ದರು.

ಈ ವೇಳೆ, ಜಯಮಹಲ್‌ ಬಳಿ ನಡೆದ ಡಾಂಬರೀಕರಣ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದು ಕಂಡು ಬಂದಿತ್ತು. ಗುತ್ತಿಗೆದಾರ ಕೆ.ಎನ್‌.ವಸಂತ್‌ ಕುಮಾರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !