ಎಚ್‌ಎಎಲ್‌ ಅಧಿಕಾರಿಗೆ ನಾಲ್ಕು ವರ್ಷ ಜೈಲು

7
ಕೇಬಲ್‌ ಕಂಪನಿಯಿಂದ ಲಂಚ ಪಡೆಯುವಾಗ ಸಿಕ್ಕಿಬಿದ್ದ ಪ್ರಕರಣ

ಎಚ್‌ಎಎಲ್‌ ಅಧಿಕಾರಿಗೆ ನಾಲ್ಕು ವರ್ಷ ಜೈಲು

Published:
Updated:

ಬೆಂಗಳೂರು: ಕೇಬಲ್‌ ಪೂರೈಸುವ ಕಂಪೆನಿಯೊಂದರಿಂದ ₹ 50,000 ಲಂಚ ಸ್ವೀಕರಿಸುವಾಗ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದ ‘ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿ’. (ಎಚ್‌ಎಎಲ್‌) ಮುಖ್ಯ ವ್ಯವಸ್ಥಾಪಕ ಮಂದ ವರಪ್ರಸಾದ ರಾವ್‌ ಅವರಿಗೆ ಇಲ್ಲಿನ ಸಿಬಿಐ ನ್ಯಾಯಾಲಯ (ಸಿಸಿಎಚ್‌– 48)  ನಾಲ್ಕು ವರ್ಷ ಜೈಲು ಹಾಗೂ ₹ 2 ಲಕ್ಷ ದಂಡ ವಿಧಿಸಿದೆ.

ದಂಡ ಪಾವತಿಸಲು ಅಧಿಕಾರಿ ವಿಫಲವಾದರೆ ಇನ್ನೂ ಒಂದು ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಧೀಶರಾದ ಪುಷ್ಟಾಂಜಲಿ ದೇವಿ ಆದೇಶಿಸಿದ್ದಾರೆ.

‘ರೇಡಿಯಂಟ್‌ ಕೇಬಲ್ಸ್‌ ಪ್ರೈವೇಟ್‌ ಲಿ’. ವಾಪಸ್‌ ಪಡೆದಿದ್ದ ದೋಷಪೂರಿತ ಕೇಬಲ್‌ಗೆ ಬ್ಯಾಂಕ್‌ ಖಾತರಿ ಕೊಟ್ಟಿದ್ದರು. ಅದು ಜಾರಿ ಆಗದಂತೆ ತಡೆಯಲು ವರಪ್ರಸಾದ್‌ ರಾವ್‌ ₹ 50,000 ಲಂಚ ಕೇಳಿದ್ದರು. ಲಂಚದ ಹಣ ಸ್ವೀಕರಿಸುವಾಗ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ರೇಡಿಯಂಟ್‌ ಕೇಬಲ್ಸ್‌ ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಸಿ. ವೆಂಕಟೇಶ್ವರಲು ನೀಡಿದ ದೂರಿನನ್ವಯ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್‌ 7, 13 (1)(ಡಿ) ಹಾಗೂ 13(2) ಅಡಿ ಪ್ರಕರಣ ದಾಖಲು ಮಾಡಲಾಗಿತ್ತು. ಪ್ರಕರಣ ದಾಖಲಾದ 14 ವರ್ಷದ ಬಳಿಕ ರಾವ್‌ಗೆ ಶಿಕ್ಷೆಯಾಗಿದೆ.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !