ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂ. 28ರಿಂದ ಹುಬ್ಬಳ್ಳಿಯಿಂದ ಇಂಡಿಗೊ ಸೇವೆ ಕಾರ್ಯಾರಂಭ

Last Updated 16 ಮೇ 2018, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಂಡಿಗೊ ಸಂಸ್ಥೆಯು, ದೇಶದ ಐದು ನಗರಗಳಿಗೆ ಹುಬ್ಬಳ್ಳಿಯಿಂದ ನೇರ ವಿಮಾನಯಾನ ಸೇವೆ ಆರಂಭಿಸಲಿದೆ.

ಜೂನ್‌ 28ರಿಂದ ಕೊಚ್ಚಿ, ಗೋವಾಕ್ಕೆ ಹಾಗೂ ಜುಲೈ 1ರಿಂದ ಬೆಂಗಳೂರು, ಅಹಮದಾಬಾದ್‌ ಮತ್ತು ಚೆನ್ನೈ ನಗರಗಳಿಗೆ ಪ್ರತಿದಿನ ವಿಮಾನಯಾನ ಸೌಲಭ್ಯ ಒದಗಿಸಲಿದೆ. ಈಗಾಗಲೇ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ. ₹1,299ರಿಂದ ದರ ಆರಂಭವಾಗಲಿದೆ.

‘ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ಮತ್ತು ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿಯಿಂದ ಬೇರೆ ಬೇರೆ ನಗರಗಳಿಗೆ ವಿಮಾನಯಾನ ಸೌಲಭ್ಯ ಆರಂಭಿಸಲು ತುಂಬಾ ಸಂತೋಷವಾಗುತ್ತಿದೆ. ಇದರಿಂದ ಪ್ರಮುಖ ನಗರಗಳ ಜೊತೆ ವಾಣಿಜ್ಯ ಸಂಪರ್ಕ ಸಾಧಿಸುವುದು ಸುಲಭವಾಗುತ್ತದೆ. ಪ್ರಯಾಣಿಕರಿಗೆ ಅನುಕೂಲವಾಗುವ ದರ ನಿಗದಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಿಯಾಯಿತಿ ನೀಡಲಾಗುವುದು’ ಎಂದು ಇಂಡಿಗೊ ಸಂಸ್ಥೆಯ ಮುಖ್ಯ ವಾಣಿಜ್ಯ ಅಧಿಕಾರಿ ಸಂಜಯ ಕುಮಾರ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಟೈಸ್‌ ಜೆಟ್‌ಗೆ ಉತ್ತಮ ಪ್ರತಿಕ್ರಿಯೆ: ಮೂರು ದಿನಗಳ ಹಿಂದೆ ಸ್ಪೈಸ್‌ ಜೆಟ್‌ ಸಂಸ್ಥೆ ಹುಬ್ಬಳ್ಳಿಯಿಂದ ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಚೆನ್ನೈ ನಗರಗಳಿಗೆ ಆರಂಭಿಸಿರುವ ವಿಮಾನಯಾನ ಸೌಲಭ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ವಿಮಾನ ಪ್ರತಿದಿನ ಎರಡು ಬಾರಿ ಹುಬ್ಬಳ್ಳಿ– ಬೆಂಗಳೂರು ಮಧ್ಯೆ ಸಂಚರಿಸುತ್ತಿದೆ. ದಿನಕ್ಕೊಮ್ಮೆ ಹುಬ್ಬಳ್ಳಿಯಿಂದ ಚೆನ್ನೈ, ಮುಂಬೈ ಮತ್ತು ಹೈದರಾಬಾದ್‌ಗೆ ತೆರಳುತ್ತಿದೆ.

‘ಪ್ರತಿ ವಿಮಾನದಲ್ಲಿ 78ರಿಂದ 80 ಸೀಟುಗಳಿದ್ದು, ನಿತ್ಯ ಶೇ 80ರಷ್ಟು ಸೀಟುಗಳು ಭರ್ತಿಯಾಗುತ್ತಿವೆ. ಪ್ರಯಾಣಿ
ಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ’ ಎಂದು ಹುಬ್ಬಳ್ಳಿ ನಿಲ್ದಾಣದಲ್ಲಿರುವ ಸ್ಟೈಸ್‌ ಜೆಟ್‌ ಸಂಸ್ಥೆಯ ವ್ಯವಸ್ಥಾಪಕ ನಿಜಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT