‘ಹೃದಯ ಸ್ತಂಭನದಿಂದ ಶೇ 25ರಷ್ಟು ಸಾವು’

7
ಸೊಸೈಟಿ ಆಫ್‌ ಮಿನಿಮಲಿ ಇನ್‌ವ್ಯಾಸಿವ್‌ ಕಾರ್ಡಿಯೊವ್ಯಾಸ್ಕುಲರ್‌ ಎಂಡ್‌ ಥೊರಾಸಿಸ್‌ ಸರ್ಜನ್ಸ್‌ ಆಫ್‌ ಇಂಡಿಯಾ’ 3ನೇ ವರ್ಷದ ಸಮ್ಮೇಳನ

‘ಹೃದಯ ಸ್ತಂಭನದಿಂದ ಶೇ 25ರಷ್ಟು ಸಾವು’

Published:
Updated:

ಬೆಂಗಳೂರು: ‘ಭಾರತದಲ್ಲಿ ಶೇ 25ರಷ್ಟು ಸಾವುಗಳು ಹೃದಯ ಸ್ತಂಭನದಿಂದ ಆಗುತ್ತಿವೆ. ಇದಕ್ಕೆ ನಮ್ಮ ಜೀವನಶೈಲಿಯೇ ಕಾರಣ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ಆಯೋಜನೆಗೊಂಡಿದ್ದ ‘ಸೊಸೈಟಿ ಆಫ್‌ ಮಿನಿಮಲಿ ಇನ್‌ವ್ಯಾಸಿವ್‌ ಕಾರ್ಡಿಯೊವ್ಯಾಸ್ಕುಲರ್‌ ಎಂಡ್‌ ಥೊರಾಸಿಸ್‌ ಸರ್ಜನ್ಸ್‌ ಆಫ್‌ ಇಂಡಿಯಾ’ ಮೂರನೇ ವರ್ಷದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

‘ನನಗೂ ಹೃದಯ ರಕ್ತನಾಳದ ಸಮಸ್ಯೆ ಆಗಿತ್ತು. ಡಾ.ಸತ್ಯಕಿ ನಂಬಾಲಾ ಅವರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದೆ. ಕರ್ನಾಟಕದಲ್ಲಿ ಹೃದಯ ಕಾಯಿಲೆಗೆ ಸಂಬಂಧಿಸಿದಂತೆ ಅತ್ಯುತ್ತಮ ಆಸ್ಪತ್ರೆಗಳು ಇವೆ. ಇದರಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಕೂಡ ಒಂದು. ಅತ್ಯಾಧುನಿಕ ವ್ಯವಸ್ಥೆ ಇಲ್ಲಿದೆ’ ಎಂದರು.

‘ಭಾರತದಲ್ಲಿ 1960ರ ಸಂದರ್ಭದಲ್ಲಿ ಶೇ 2ರಷ್ಟು ಜನರು ಮಾತ್ರ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದರು. ಈಗ ಆ ಪ್ರಮಾಣ ಹೆಚ್ಚಿದೆ. 40 ವರ್ಷದೊಳಗಿನವರೂ ಕೂಡ ಸಮಸ್ಯೆಗೆ ಒಳಗಾಗುತ್ತಿರುವುದು ವಿಪರ್ಯಾಸ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲಾ ಪ್ರಯತ್ನ ಹಾಕಬೇಕು. ಸಾಮಾನ್ಯ ಜನರೂ ಕಡಿಮೆ ದರದಲ್ಲಿ ಚಿಕಿತ್ಸೆ ಪಡೆಯಬೇಕು. ಇದಕ್ಕೆ ಸರ್ಕಾರ ಬದ್ಧವಾಗಿದೆ’ ಎಂದರು.

ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಹಾಜರಿದ್ದರು.

‘ಜಿ.ಟಿ.ದೇವೆಗೌಡ ಅವರೇ ಜಿಲ್ಲಾ ಉಸ್ತುವಾರಿ’:‘ಜಿ.ಟಿ.ದೇವೇಗೌಡ ಅವರೇ ಮೈಸೂರು ಜಿಲ್ಲಾ ಉಸ್ತುವಾರಿ. ಅವರ ನೇತೃತ್ವದಲ್ಲಿಯೇ ಕಾರ್ಯಕ್ರಮಗಳು ನಡೆಯುತ್ತವೆ’ ಎಂದು ದಸರಾ ಉಸ್ತುವಾರಿಯನ್ನು ಸಾ.ರಾ.ಮಹೇಶ್‌ ಅವರಿಗೆ ವಹಿಸಿರುವ ಕುರಿತು ಎದುರಾದ ಪ್ರಶ್ನೆಗೆ ಎಚ್‌.ಡಿ.ಕುಮಾರಸ್ವಾಮಿ ಉತ್ತರಿಸಿದರು.

**

‘ಜಿ.ಟಿ.ದೇವೇಗೌಡ ಅವರೇ ಉಸ್ತುವಾರಿ’

‘ಜಿ.ಟಿ.ದೇವೇಗೌಡ ಅವರೇ ಮೈಸೂರು ಜಿಲ್ಲಾ ಉಸ್ತುವಾರಿ. ಅವರ ನೇತೃತ್ವದಲ್ಲಿಯೇ ಕಾರ್ಯಕ್ರಮಗಳು ನಡೆಯುತ್ತವೆ’ ಎಂದು ದಸರಾ ಉಸ್ತುವಾರಿಯನ್ನು ಸಾ.ರಾ.ಮಹೇಶ್‌ ಅವರಿಗೆ ವಹಿಸಿರುವ ಕುರಿತು ಎದುರಾದ ಪ್ರಶ್ನೆಗೆ ಎಚ್‌.ಡಿ.ಕುಮಾರಸ್ವಾಮಿ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !