ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಿ ತರಕಾರಿ ಅಂಗಡಿ ಆಗಲಿವೆ ಬಸ್‌ಗಳು

ಕೆಎಸ್‌ಆರ್‌ಟಿಸಿ ಹಳೇ ಬಸ್‌ಗಳಿಗೆ ಲಾರಿಗಳ ರೂಪ ನೀಡಲು ಸಿದ್ಧತೆ
Last Updated 25 ಏಪ್ರಿಲ್ 2020, 21:45 IST
ಅಕ್ಷರ ಗಾತ್ರ

ಬೆಂಗಳೂರು:ಹಳೇ ಬಸ್‌ಗಳನ್ನು ಲಾರಿಗಳಾಗಿ ಪರಿವರ್ತಿಸಿ ಕಂಟೈನ್‌ಮೆಂಟ್ ಪ್ರದೇಶದಲ್ಲಿ ಸಂಚಾರಿ ತರಕಾರಿ ಅಂಗಡಿಗಳ ರೂಪ ನೀಡಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.

ಕೆಎಸ್‌ಆರ್‌ಟಿಸಿಯಲ್ಲಿ ಸದ್ಯ50 ಲಾರಿಗಳಿದ್ದು, ನಿಗಮಕ್ಕೆ ಸಂಬಂಧಿಸಿದ ಸರಕು ಸಾಗಿಸಲು ಬಳಸಿಕೊಳ್ಳಲಾಗುತ್ತಿದೆ. ಕೋವಿಡ್‌ –19 ಸೋಂಕಿತರಿರುವ ಬಡಾವಣೆಗಳನ್ನು ಸರ್ಕಾರ ಕಂಟೈನ್‌ಮೆಂಟ್ ಪ್ರದೇಶಗಳೆಂದು ಗುರುತಿಸಿದೆ. ಅಲ್ಲಿನ ಜನರು ಹೊರಕ್ಕೆ ಬರದಂತೆ ದಿಗ್ಬಂಧನ ವಿಧಿಸಿದ್ದು, ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಪೂರೈಸುತ್ತಿದೆ.

ತಳ್ಳುವ ಗಾಡಿಗಳು, ಗೂಡ್ಸ್ ಆಟೊರಿಕ್ಷಾಗಳ ಮೂಲಕ ಈ ಪ್ರದೇಶಗಳಿಗೆ ತರಕಾರಿ ಪೂರೈಸಲಾಗುತ್ತಿದೆ. ತರಕಾರಿ ಗಾಡಿಯವರಿಗೆ ಕೊರೊನಾ ಸೋಂಕು ಹರಡು ಸಾಧ್ಯತೆ ಇರುವ ಕಾರಣ ಕೆಎಸ್‌ಆರ್‌ಟಿಸಿ ಹಳೇ ಬಸ್‌ಗಳನ್ನು ಸಂಚಾರಿ ತರಕಾರಿ ಅಂಗಡಿಗಳಾಗಿ ಮಾರ್ಪಡಿಸಲು ನಿರ್ಧರಿಸಲಾಗಿದೆ.

‘ಸದ್ಯ ಇರುವ 50 ಲಾರಿಗಳನ್ನು ಮಾರ್ಪಡಿಸುವ ಕಾರ್ಯ ನಡೆಯುತ್ತಿದೆ. ಅಲ್ಲದೇ, ಹಳೇ ಬಸ್‌ಗಳ ಮೇಲ್ಚಾವಣಿ ತೆಗೆದು ಹೊಸ ರೂಪ ಕೊಡಲು ಸಿದ್ಧತೆ ನಡೆದಿದೆ. ಮೈಸೂರು, ಬೆಂಗಳೂರು ಸೇರಿದಂತೆಕೋವಿಡ್–19 ಹಾಟ್‌ಸ್ಪಾಟ್ ಇರುವ ಪ್ರದೇಶಗಳಿಗೆ ಈ ಸಂಚಾರ ತರಕಾರಿ ಅಂಗಡಿಗಳನ್ನು ಕಳುಹಿಸಲು ನಿರ್ಧರಿಸಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದರು.

ಒಪ್ಪಂದದ ಆಧಾರದಲ್ಲಿ ಬಸ್ ಸೇವೆ
ಅಗತ್ಯ ಸೇವೆಗಳನ್ನು ಒದಗಿಸಲು ಸರ್ಕಾರ ಅನುಮತಿ ನೀಡಿರುವಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರ ಸಂಚಾರಕ್ಕೆ ಒಪ್ಪಂದದ ಮೇರೆಗೆ ಬಸ್‌ಗಳನ್ನು ಒದಗಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.

ಬಸ್‌ಗಳಲ್ಲಿ ಶೇ 30ರಿಂದ ಶೇ 40ರಷ್ಟು(20 ಜನ) ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕು. ಸಾಮಾನ್ಯ ಜನರು(ಅಗತ್ಯ ಸೇವೆ ಅಲ್ಲದ) ಪ್ರಯಾಣಿಸಲು ಅವಕಾಶ ಇಲ್ಲ. ಅಂತರ ಕಾಯ್ದುಕೊಂಡು ಕುಳಿತುಕೊಳ್ಳಬೇಕು. ಎಲ್ಲರೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು ಎಂಬ ಷರತ್ತುಗಳನ್ನು ವಿಧಿಸಿ ಬಸ್‌ ಒದಗಿಸಲು ತೀರ್ಮಾನಿಸಿದೆ.

ಪ್ರತಿ ಕಿಲೋ ಮಿಟರ್‌ ಸಂಚಾರಕ್ಕೆಕರ್ನಾಟಕ ಸಾರಿಗೆ(ಕೆಂಪು ಬಸ್) ಬಸ್‌ಗೆ ₹40, ರಾಜಹಂಸ ಬಸ್‌ಗೆ ₹45 ದರ ನಿಗದಿ ಮಾಡಲಾಗಿದೆ. ದಿನ ಲೆಕ್ಕದಲ್ಲಿ ಒಪ್ಪಂದ ಮಾಡಿಕೊಂಡರೆ 12 ಗಂಟೆ ಅವಧಿಗೆ ಕೆಂಪು ಬಸ್‌ಗೆ ₹8 ಸಾವಿರ, ರಾಜಹಂಸ ಬಸ್‌ಗೆ ₹9 ಸಾವಿರ ದರ ನಿಗದಿ ಮಾಡಲಾಗಿದೆ.

‘ಬೆಂಗಳೂರು ನಗರದಲ್ಲಿ ಬಿಎಂಟಿಸಿ ಇದೇ ರೀತಿಯ ಸೇವೆ ಒದಗಿಸುತ್ತಿರುವ ಕಾರಣ ಬೇರೆ ನಗರಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆ ಮಾಡಲಿವೆ’ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಮಿಕರಿಗಾಗಿ 137 ಬಸ್
‌ವಲಸೆ ಕಾರ್ಮಿಕರನ್ನು ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಲುತುಮಕೂರು, ಹಾಸನ, ಚಿಕ್ಕಮಗಳೂರು, ಮಂಗಳೂರು,‌ ‌ ಶಿವಮೊಗ್ಗ ಜಿಲ್ಲಾಡಳಿತದ ಮನವಿ ಮೇರೆಗೆ 137 ಬಸ್‌ಗಳನ್ನು ನಿಗಮ ಒದಗಿಸಿದೆ.

‘ಅಂತರ ಕಾಯ್ದುಕೊಳ್ಳಲು ಪ್ರತಿ ಬಸ್‌ನಲ್ಲಿ 21 ಜನರ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಲಾಗಿದೆ’ ಎಂದು ನಿಗಮ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT