ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸಂಕಷ್ಟಕ್ಕೆ ಮಿಡಿದ ಸ್ಮಶಾನ ಕಾಯುವವರು: ತಿಂಗಳ ವೇತನ ಸಹಾಯ ನಿಧಿಗೆ

Last Updated 20 ಏಪ್ರಿಲ್ 2020, 14:52 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 60 ರುದ್ರಭೂಮಿ ಹಾಗೂ ಹತ್ತು ವಿದ್ಯುತ್‌ ಚಿತಾಗಾರಗಳ 148 ನೌಕರರು ತಮ್ಮ ಒಂದು ತಿಂಗಳ ಪೂರ್ತಿ ವೇತನವನ್ನು ಮುಖ್ಯಮಂತ್ರಿಗಳ ಕೊರೊನಾ ಸಂತ್ರಸ್ತರ ಸಹಾಯ ನಿಧಿಗೆ ನೀಡಿದ್ದಾರೆ.

ತಲಾ ₹ 14–17 ಸಾವಿರದಷ್ಟು ತಿಂಗಳ ವೇತನವನ್ನು ಪಡೆಯುತ್ತಿದ್ದ ಇವರು ಆ ಮೊತ್ತವನ್ನು ಪಾಲಿಕೆಯ ಆಯುಕ್ತರ ಮೂಲಕ ಸರ್ಕಾರಕ್ಕೆ ತಲುಪಿಸಿದ್ದಾರೆ.

ವರ್ಷದ ಹಿಂದೆ ಈ ನೌಕರರ ಮಾಸಿಕ ವೇತನ ₹5–6 ಸಾವಿರದಷ್ಟು ಇತ್ತು. ಕೇಂದ್ರ ಸರ್ಕಾರದ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾಗಿರುವ ಜಗದೀಶ ಹಿರೇಮನಿ ಅವರು ರಾಜ್ಯ ಸರ್ಕಾರ, ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಕನಿಷ್ಠ ವೇತನ ಸೌಲಭ್ಯ ಒದಗಿಸುವಂತೆ ಒತ್ತಡ ಹೇರಿದ್ದರು. ಬಳಿಕ ವೇತನ ಹೆಚ್ಚಳವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT