ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 12.43 ಲಕ್ಷ ಸಮೇತ ಕೊರಿಯರ್ ಬಾಯ್ ಪರಾರಿ

Last Updated 8 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕಂಪನಿಯೊಂದರ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಡೆಲಿವರಿ ಬಾಯ್‌ ಅಶ್ವಿನ್ ಕುಮಾರ್ ಸಿಂಗ್ ಎಂಬಾತ, ಕೊರಿಯರ್‌ನಲ್ಲಿ ಬಂದಿದ್ದ ಚೆಕ್‌ ಬಳಸಿ ₹ 12.43 ಲಕ್ಷ ಡ್ರಾ ಮಾಡಿಕೊಂಡು ಪರಾರಿಯಾಗಿರುವ ಬಗ್ಗೆ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಹೊಸಗುಡ್ಡದಹಳ್ಳಿ ಕೊರಿಯರ್ ಏಜೆನ್ಸಿಯೊಂದರ ಮಾಲೀಕರಾದ ದೇವಿಕಾ ಎಂಬುವರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಅಶ್ವಿನ್‌ಕುಮಾರ್‌ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಜುಲೈ 12ರಂದು ಅಶ್ವಿನ್‌ಕುಮಾರ್‌ ಕೆಲಸಕ್ಕೆ ಸೇರಿದ್ದ. ಇತ್ತೀಚೆಗೆ ‘ಎಂ.ಪಿ ಡಿಸ್ಟ್ರಿಬ್ಯೂಟರ್ಸ್’ ಕಂಪನಿ ಹೆಸರಿಗೆ ಬಂದಿದ್ದ ಕೊರಿಯರ್‌ನ್ನು ಡೆಲಿವರಿ ಮಾಡಲು ಹೋಗಿದ್ದ. ಅದರಲ್ಲಿದ್ದ ₹ 12.43 ಲಕ್ಷ ಚೆಕ್ ಕದ್ದಿದ್ದ. ಕಂಪನಿಗೆ ಕೊರಿಯರ್ ಲುಪಿಸಿರುವುದಾಗಿ ಏಜೆನ್ಸಿಯವರಿಗೆ ಸುಳ್ಳು ಹೇಳಿದ್ದ.’

‘ಅದಾಗಿ ಕೆಲವೇ ದಿನಗಳಲ್ಲಿ ಮಲ್ಲೇಶ್ವರದ ಜನಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ‘ಎಂ.ಪಿ ಡಿಸ್ಟ್ರಿಬ್ಯೂಟರ್ಸ್’ ಹೆಸರಿನಲ್ಲಿ ಖಾತೆ ತೆರೆದಿದ್ದ ಆರೋಪಿ, ಅದೇ ಖಾತೆಗೆ ಚೆಕ್ ಹಾಕಿ ಹಣ ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT