ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕೋವಿಡ್: 6,056 ಸಕ್ರಿಯ ಪ್ರಕರಣ

Last Updated 6 ಜುಲೈ 2022, 16:14 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳದಿಂದಸಕ್ರಿಯಪ್ರಕರಣಗಳ ಸಂಖ್ಯೆ 6,056ಕ್ಕೆ ಏರಿಕೆಯಾಗಿದೆ.

ಬುಧವಾರ 1,053 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ದೈನಂದಿನ ಕೋವಿಡ್ ಪರೀಕ್ಷೆಗಳ ಸಂಖ್ಯೆ 19 ಸಾವಿರದ ಗಡಿ ಸಮೀಪಿಸಿದೆ. ಸೋಂಕು ದೃಢ ಪ್ರಮಾಣ ಶೇ 4.26ರಷ್ಟಿದೆ. ಮರಣಪ್ರಕರಣಹೊಸದಾಗಿ ವರದಿಯಾಗಿಲ್ಲ. ಸೋಂಕಿತರಲ್ಲಿ ಬೆಂಗಳೂರಿನಲ್ಲಿ 985 ಮಂದಿ ಹೊಸದಾಗಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 18.09 ಲಕ್ಷಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ಈವರೆಗೆ 17.86 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.

ಸೋಂಕಿತರಲ್ಲಿ ಸದ್ಯ 93 ಮಂದಿಆಸ್ಪತ್ರೆಚಿಕಿತ್ಸೆಗೆ ಒಳಗಾಗಿದ್ದಾರೆ. 84 ಮಂದಿ ಸಾಮಾನ್ಯ ಹಾಸಿಗೆ, ಆರು ಮಂದಿ ಎಚ್‌ಡಿಯು ಹಾಸಿಗೆ ಹಾಗೂ ಮೂವರು ಐಸಿಯು ಹಾಸಿಗೆಯಲ್ಲಿಚಿಕಿತ್ಸೆಪಡೆದುಕೊಳ್ಳುತ್ತಿದ್ದಾರೆ. ಉಳಿದವರು ಮನೆ ಆರೈಕೆಗೆ ಒಳಗಾಗಿದ್ದಾರೆ.

ನಗರದಲ್ಲಿ ಒಂದು ವಾರದಲ್ಲಿ 1.21 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, 6,189 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಈ ಅವಧಿಯಲ್ಲಿ5,577 ಮಂದಿ ಚೇತರಿಸಿಕೊಂಡಿದ್ದಾರೆ. ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ.

ವಾರದಿಂದ ಬೆಳ್ಳಂದೂರು (74), ಕಾಡುಗೋಡಿ (40),ದೊಡ್ಡ ನೆಕ್ಕುಂದಿ (37), ವರ್ತೂರು (31), ಎಚ್‌ಎಸ್‌ಆರ್ ಲೇಔಟ್‌ (27), ಹೊರಮಾವು (25),ಹಗದೂರು (21),ಹೂಡಿ (18), ಗರುಡಾಚಾರ್ ಪಾಳ್ಯ (14) ಹಾಗೂಬೇಗೂರಿನಲ್ಲಿ (14)ದೈನಂದಿನ ಪ್ರಕರಣಗಳ ಸರಾಸರಿ ಅಧಿಕವಿದೆ. ಈ ವಾರ್ಡ್‌ಗಳಲ್ಲಿ ನೂರಕ್ಕೂ ಅಧಿಕಸಕ್ರಿಯಪ್ರಕರಣಗಳಿವೆ.

ಅಧಿಕ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಮಹಾನಗರಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಮುಂಬೈನಲ್ಲಿ 7 ಸಾವಿರಕ್ಕೂ ಅಧಿಕ ಸೋಂಕಿತರಿದ್ದಾರೆ. ಚೆನ್ನೈನಲ್ಲಿಈ ಸಂಖ್ಯೆ 6,500ಕ್ಕೆ ತಲುಪಿದೆ. ನವದೆಹಲಿಯಲ್ಲಿ 2 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಕೋಲ್ಕತ್ತದಲ್ಲಿ 300ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸೋಂಕಿತರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT