ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ವಿ ಸೂರ್ಯ, ಸತೀಶ್‌ ರೆಡ್ಡಿ ಬಂಧನಕ್ಕೆ ಆಗ್ರಹ

Last Updated 26 ಮೇ 2021, 21:06 IST
ಅಕ್ಷರ ಗಾತ್ರ

ಬೆಂಗಳೂರು: ‘ಹಾಸಿಗೆ ಬ್ಲಾಕ್‌ ದಂಧೆ ಪ್ರಕರಣದ ಆರೋಪಿಗಳು ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಅವರ ಆಪ್ತರೆಂದು ಬಹಿರಂಗವಾಗಿದ್ದು, ಕೂಡಲೇ ಸತೀಶ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು’ ಎಂದು ಹನುಮಂತನಗರ ಬ್ಲಾಕ್ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಿ.ತೇಜೇಶ್‌ ಕುಮಾರ್‌ ಅವರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಪತ್ರ ಬರೆದಿದ್ದಾರೆ.

‘ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಾಬು ಹಾಗೂ ನೇತ್ರಾ ಬಿಜೆಪಿಯವರು ಹಾಗೂ ಶಾಸಕ ಸತೀಶ್‌ ರೆಡ್ಡಿ ಅವರ ಆಪ್ತರು ಎನ್ನಲಾಗಿದೆ. ಕೂಡಲೇ ಶಾಸಕರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಈ ದಂಧೆ ಬಯಲಿಗೆಳೆದು ಸಂಸದ ತೇಜಸ್ವಿ ಸೂರ್ಯ ಪ್ರಚಾರ ನೀಡಿದ್ದರು. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬೆಲೆಗೆಕೋವಿಡ್‌ ಲಸಿಕೆ ಹಾಕಲಾಗುತ್ತಿದ್ದು, ತೇಜಸ್ವಿ ಸೂರ್ಯ ಅವರೇ ಇದಕ್ಕೆ ರಾಯಭಾರಿಯಾಗಿ ಪ್ರಚಾರ ನೀಡಿದ್ದರು. ಆಸ್ಪತ್ರೆಗಳಲ್ಲಿ ದುಬಾರಿ ಲಸಿಕೆ ದರಪಟ್ಟಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಜನರಿಂದ ಹೆಚ್ಚಿನ ವಸೂಲಿ ಮಾಡಲುಖಾಸಗಿ ಆಸ್ಪತ್ರೆಯವರೊಂದಿಗೆ ಕೈಜೋಡಿಸಿರುವ ತೇಜಸ್ವಿ ಸೂರ್ಯ ಅವರನ್ನೂ ಬಂಧಿಸಿ ಕ್ರಮ ಕೈಗೊಳ್ಳಬೇಕು’ ಎಂದೂ ಪತ್ರದಲ್ಲಿ ಮನವಿ ಮಾಡಿದ್ದಾರೆ.

‘ಆರೋಪಿ ಬಾಬು ನನ್ನ ಆಪ್ತನಲ್ಲ’
‘ಹಾಸಿಗೆ ದಂಧೆಯಲ್ಲಿ ಬಂಧನಕ್ಕೆ ಒಳಗಾಗಿರುವ ಬಾಬು ನನ್ನ ಆಪ್ತನಲ್ಲ’ ಎಂದು ಶಾಸಕ ಸತೀಶ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ‘ಬೊಮ್ಮನಹಳ್ಳಿಯಲ್ಲಿ ಸಾವಿರಾರು ಮಂದಿ ಪರಿಚಯದವರಿದ್ದಾರೆ. ಅದರಲ್ಲಿ ಆತನೂ ಒಬ್ಬ ಇರಬಹುದು. ಇಂತಹ ನೀಚ ಕೆಲಸವನ್ನು ಎಂದೂ ಬೆಂಬಲಿಸುವುದಿಲ್ಲ. ದಂಧೆಯನ್ನು ಹೊರಗೆ ತಂದಿದ್ದೇ ನಾವು. ಯಾರೇತಪ್ಪು ಮಾಡಿರಲಿ, ಅವರು ಶಿಕ್ಷೆ ಅನುಭವಿಸಲಿ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ದಂಧೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ಜರುಗಿಸಲಿ’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT