ಮಂಗಳವಾರ, ಜುಲೈ 27, 2021
21 °C
ಒಂದೇ ದಿನ 17 ಮಂದಿಗೆ ಸೋಂಕು * ನಗರದಲ್ಲಿ ಮೃತರ ಸಂಖ್ಯೆ 23ಕ್ಕೆ ಏರಿಕೆ

ಬೆಂಗಳೂರು | ಕೋವಿಡ್-19 ಸೋಂಕಿತರ ಸಂಖ್ಯೆ 600ರ ಸನಿಹಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ 17 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಗುರುವಾರ ದೃಢ ಪಟ್ಟಿದ್ದು, ಸೋಂಕಿತರ ಸಂಖ್ಯೆ 581ಕ್ಕೆ ಏರಿಕೆಯಾಗಿದೆ. ಮತ್ತೆ ಇಬ್ಬರು ಮೃತಪಟ್ಟಿದ್ದು, ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 23ಕ್ಕೆ ತಲುಪಿದೆ. 

ವಾರದಲ್ಲಿ 10 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲಿದವರು. ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿಯೂ 6 ಮಂದಿ ಐಎಲ್ಐ ಸಮಸ್ಯೆಯಿಂದ ಬಳಲುತ್ತಿದ್ದವರು. ವಾಲ್ಮಿಕಿ ನಗರದಲ್ಲಿ 58 ವರ್ಷದ ಮಹಿಳೆ ಕೋವಿಡ್ ಪೀಡಿತರಾಗಿದ್ದು, ಜ್ವರ ಹಾಗೂ ಕೆಮ್ಮಿನ ಸಮಸ್ಯೆಯಿಂದ ಆಸ್ಪತ್ರೆಯೊಂದರಲ್ಲಿ ತಪಾಸಣೆ ಮಾಡಿಸಿಕೊಂಡಿದ್ದರು. ಬನಶಂಕರಿ ಎರಡನೇ ಹಂತದಲ್ಲಿ 23 ವರ್ಷದ ತುಂಬು ಗರ್ಭಿಣಿಗೆ ಸೋಂಕು ತಗುಲಿದೆ.

ಪಾದರಾಯನಪುರದ 25 ವರ್ಷದ ಮಹಿಳೆ ಜೂ.9ರಂದು ಮಗುವಿಗೆ ಜನ್ಮನೀಡಿದ್ದರು. ಅವರಿಗೂ ಕೊರೊನಾ ಇದೆ. ಇದರಿಂದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಮಗುವನ್ನು ವಾಣಿವಿಲಾಸ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಬ ಅಂಜನಪ್ಪ ಗಾರ್ಡನ್‌ನ 55 ವರ್ಷದ ಮಹಿಳೆ , ಮೈಸೂರು ರಸ್ತೆಯ 45 ವರ್ಷದ ಪುರುಷ, ಬಿಟಿಎಂ ಬಡಾವಣೆಯ ಎರಡನೇ ಹಂತದ ಸೋಮೇಶ್ವರ ಕಾಲೊನಿಯ 37 ವರ್ಷದ ಮಹಿಳೆ ಕೋವಿಡ್ ಪೀಡಿತರಾಗಿದ್ದಾರೆ.

‌ಮಹಾರಾಷ್ಟ್ರದಿಂದ ಬಂದ 36 ವರ್ಷದ ಮಹಿಳೆ, 39 ವರ್ಷದ ಪುರುಷ, 16 ವರ್ಷದ ಬಾಲಕಿ ಹಾಗೂ 45 ವರ್ಷದ ಮಹಿಳೆ ಕ್ವಾರಂಟೈನ್‌ನಲ್ಲಿ ಇದ್ದರು. ಇವರೆಲ್ಲ ಕೋವಿಡ್‌ ರೋಗಿಗಳಾಗಿದ್ದು. ಎಚ್‌ಎಎಲ್‌ ನ 65ರ ವೃದ್ಧನಿಗೆ ಸೋಂಕು ತಗುಲಿರುವ ಬಗ್ಗೆ ಪತ್ತೆ ಮಾಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು