ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಶೇ 30ರಷ್ಟು ಮಂದಿಗೆ ಇನ್ನಷ್ಟೇ ಸಿಗಬೇಕಿದೆ ಕೋವಿಡ್ ಲಸಿಕೆ

45 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ: ಮನೆ ಮನೆ ಸಮೀಕ್ಷೆಯಿಂದ ಲಭ್ಯವಾದ ಮಾಹಿತಿ
Last Updated 15 ಜುಲೈ 2021, 20:37 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನೆಲೆಸಿರುವ 45 ವರ್ಷ ಮೇಲ್ಪಟ್ಟವರಲ್ಲಿ ಶೇ 30 ಮಂದಿಯಷ್ಟೇ ಕೋವಿಡ್‌ ಲಸಿಕೆ ಪಡೆದಿದ್ದಾರೆ. ಬಿಬಿಎಂಪಿ ಸಿಬ್ಬಂದಿ ನಡೆಸಿರುವ ಮನೆ ಮನೆ ಸಮೀಕ್ಷೆಯಿಂದ ಈ ಮಾಹಿತಿ ಲಭ್ಯವಾಗಿದೆ.

ಎಷ್ಟು ಮಂದಿ ಲಸಿಕೆ ಪಡೆಯಲು ಬಾಕಿ ಉಳಿದಿದ್ದಾರೆ, ಲಸಿಕೆ ಪಡೆಯದಿರುವುದಕ್ಕೆ ಕಾರಣಗಳು ಏನಾದರೂ ಇವೆಯೇ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ 20 ದಿನಗಳಿಂದ ಬಿಬಿಎಂಪಿ ಆರೋಗ್ಯ ವಿಭಾಗದ ಸಿಬ್ಬಂದಿ ಮನೆ ಮನೆ ಸಮೀಕ್ಷೆ ನಡೆಸಿದ್ದರು. ಇದರ ಅಂಕಿ ಅಂಶಗಳನ್ನು ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಆರೋಗ್ಯ ವಿಭಾಗವು ಸಲ್ಲಿಸಿದೆ.

ಬಿಬಿಎಂಪಿ ಪ್ರಕಾರ ನಗರದ ಎಂಟು ವಲಯಗಳಲ್ಲಿ 45 ವರ್ಷ ಮೇಲ್ಪಟ್ಟವರ ಸಂಖ್ಯೆ 24 ಲಕ್ಷ. ಅವರಲ್ಲಿ ಇದುವರೆಗೆ16.94 ಲಕ್ಷ ಮಂದಿ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದು, 7.09 ಲಕ್ಷ ಮಂದಿ ಇನ್ನಷ್ಟೇ ಲಸಿಕೆ ಪಡೆಯಬೇಕಿದೆ.

45 ವರ್ಷ ಮೇಲ್ಪಟ್ಟವರಲ್ಲಿ ಲಸಿಕೆ ಪಡೆಯಲು ಬಾಕಿ ಇರುವವರ ಪ್ರಮಾಣ ತೀರಾ ಕಡಿಮೆ (ಶೇ 13ರಷ್ಟು) ಇರುವುದು ಯಲಹಂಕ ವಲಯದಲ್ಲಿ. ಉಳಿದ ವಲಯಗಳಿಗೆ ಹೋಲಿಸಿದರೆ ಲಸಿಕೆ ಪಡೆಯದವರ ಪ್ರಮಾಣ ಹೆಚ್ಚು ಇರುವುದು ಮಹದೇವಪುರ ವಲಯದಲ್ಲಿ (ಶೇ 56ರಷ್ಟು). ಈಚಿನ ದಿನಗಳಲ್ಲಿ ಮಹದೇವಪುರ ವಲಯದಲ್ಲೇ ಸೋಂಕು ಪತ್ತೆ ಪ್ರಮಾಣವೂ ಹೆಚ್ಚು ಇದೆ.

‘ನಾವು ಸಮೀಕ್ಷೆ ಆರಂಭಿಸಿದ ಬಳಿಕ ಕೆಲವರು ಲಸಿಕೆ ಪಡೆದಿದ್ದಾರೆ. ಹಾಗಾಗಿ ಈ ಅಂಕಿ ಅಂಶಗಳಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈ ಸಮೀಕ್ಷೆ ಆರಂಭವಾದ ಬಳಿಕ ನಗರದಲ್ಲಿ ಒಟ್ಟು 14.95 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಜುಲೈ ತಿಂಗಳಲ್ಲಿ ಇದುವರೆಗೆ 9.80 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ಎಲ್ಲ ವಯೋವರ್ಗದವರೂ ಸೇರಿದ್ದಾರೆ.

‘ಯಾವ ವಲಯದಲ್ಲಿ ಎಲ್ಲೆಲ್ಲಿ ಎಷ್ಟು ಜನರು ಕೋವಿಡ್‌ ಲಸಿಕೆ ಪಡೆಯಲು ಬಾಕಿ ಇದ್ದಾರೆ ಎಂಬ ಸ್ಪಷ್ಟತೆ
ಪಡೆಯಲು ಈ ಸಮೀಕ್ಷೆ ನಡೆಸಿದ್ದೇವೆ. ಜನರು ಹಿಂಜರಿಕೆಯ ಕಾರಣದಿಂದ ಲಸಿಕೆ ಪಡೆಯುತ್ತಿಲ್ಲವೇ, ಲಸಿಕೆ ಪಡೆಯಲು ಏನಾದರೂ ಸಮಸ್ಯೆಗಳಿವೆಯೇ ಎಂಬ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೂ ಇದು ನೆರವಾಗುತ್ತದೆ. ಸಮೀಕ್ಷೆಯ ಅಂಶಗಳನ್ನು ಆಧರಿಸಿ ಎಲ್ಲರಿಗೂ ಲಸಿಕೆ ನೀಡುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ’ ಎಂದು ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವ ಪ್ರದೇಶಗಳಲ್ಲಿ ಎಷ್ಟು ಮಂದಿ ಲಸಿಕೆ ಪಡೆಯಲು ಬಾಕಿ ಇದೆ. ಅಲ್ಲಿ ಯಾವ ರೀತಿ ಲಸಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬ ಬಗ್ಗೆ ಈ ಸಮೀಕ್ಷೆ ಆಧರಿಸಿ ಪರಿಶೀಲನೆ ನಡೆಸುತ್ತಿದ್ದೇವೆ. ಈ ಸಮೀಕ್ಷೆಯ ವರದಿ ಆಧಾರದಲ್ಲಿ ವಾರ್ಡ್‌ ಮಟ್ಟದಲ್ಲಿ ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಏನೆಲ್ಲ ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಬೆಂಗಳೂರು: ಶೇ 30ರಷ್ಟು ಮಂದಿಗೆ ಇನ್ನಷ್ಟೇ ಸಿಗಬೇಕಿದೆ ಕೋವಿಡ್ ಲಸಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT