ಗುರುವಾರ , ಜೂನ್ 17, 2021
29 °C
ಅನ್ನಪೂರ್ಣೇಶ್ವರಿ ನಗರದ ಮನೆಯಲ್ಲಿ ಲಸಿಕೆ ಸಂಗ್ರಹ

₹ 500 ಪಡೆದು ಲಸಿಕೆ ಹಾಕುತ್ತಿದ್ದ ಸರ್ಕಾರಿ ವೈದ್ಯೆ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉಚಿತವಾಗಿ ನೀಡಲೆಂದು ಸರ್ಕಾರ ನೀಡಿದ್ದ ಲಸಿಕೆಗಳನ್ನು ಖಾಸಗಿ ಸ್ಥಳಗಳಲ್ಲಿ ಜನರಿಗೆ ಹಾಕಿ ಹಣ ಪಡೆಯುತ್ತಿದ್ದ ವೈದ್ಯೆ ಸೇರಿ ಇಬ್ಬರನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಪುಷ್ಪಿತಾ ಹಾಗೂ ಅನ್ನಪೂರ್ಣೇಶ್ವರಿನಗರದ ಐಟಿಐ ಲೇಔಟ್‌ ನಿವಾಸಿ ಪ್ರೇಮಾ ಬಂಧಿತರು.

‘ಪ್ರೇಮಾ ಅವರ ಮನೆಯಲ್ಲೇ ನಿತ್ಯವೂ ಸಂಜೆ 4 ಗಂಟೆಯಿಂದ ಲಸಿಕೆ ಹಾಕಲಾಗುತ್ತಿತ್ತು. ಸ್ಥಳೀಯ ಹಾಗೂ ಸುತ್ತಮುತ್ತಲ ಸಾರ್ವಜನಿಕರು ಮನೆಗೆ ಬಂದು ಲಸಿಕೆ ಪಡೆದುಕೊಳ್ಳುತ್ತಿದ್ದರು. ವೈದ್ಯೆ ಹಾಗೂ ಪ್ರೇಮಾ, ಪ್ರತಿಯೊಬ್ಬರಿಂದಲೂ ತಲಾ ₹ 500 ಪಡೆಯುತ್ತಿದ್ದರು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಲಸಿಕೆ ಮಾರಾಟದ ಬಗ್ಗೆ ಮಾಹಿತಿ ಬಂದಿತ್ತು. ಇನ್‌ಸ್ಪೆಕ್ಟರ್ ಲೋಹಿತ್ ನೇತೃತ್ವದ ತಂಡ, ಲಸಿಕೆ ಪಡೆಯುವ ವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದೂ ತಿಳಿಸಿದರು.

ಸರ್ಕಾರಿ ಆಸ್ಪತ್ರೆ ಲಸಿಕೆ: ‘ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಜನರಿಗೆ ವಿತರಿಸಲೆಂದು ಸರ್ಕಾರ ಲಸಿಕೆ ನೀಡಿತ್ತು. ಅವುಗಳಲ್ಲೇ ಕೆಲ ಲಸಿಕೆಗಳನ್ನು ವೈದ್ಯೆ ಪುಷ್ಪಿತಾ, ಪ್ರೇಮಾ ಅವರ ಮನೆಗೆ ತಂದು ಜನರಿಗೆ ಹಾಕುತ್ತಿದ್ದರು’ ಎಂದೂ ಹೇಳಿದರು.

‘ಆರೋಪಿಗಳು ಇದುವರೆಗೂ ನೂರಾರು ಜನರಿಗೆ ಲಸಿಕೆ ಹಾಕಿರುವ ಮಾಹಿತಿ ಇದೆ’ ಎಂದೂ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು