ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪ್ರಕರಣಗಳು 10 ವಾರ್ಡ್‌ಗಳಲ್ಲಿ ಅಧಿಕ ಕೇಸ್

Last Updated 22 ಜೂನ್ 2022, 20:50 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದು, ವಾರದಲ್ಲಿ 4,512 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಬೆಳ್ಳಂದೂರು ಸೇರಿದಂತೆ ಹತ್ತು ವಾರ್ಡ್‌ಗಳಲ್ಲಿ ವಾರದಿಂದ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.

ಸಕ್ರಿಯ ಪ್ರಕರಣಗಳ ಸಂಖ್ಯೆ ಐದು ಸಾವಿರದ ಗಡಿ ಸಮೀಪಿಸಿದೆ.ವಾರದಲ್ಲಿ ವರದಿಯಾದ ಪ್ರಕರಣಗಳನ್ನು ಬಿಬಿಎಂಪಿ ವಾರ್‌ ರೂಮ್ ವಿಶ್ಲೇಷಿಸಿದೆ.ಬೆಳ್ಳಂದೂರು (69), ದೊಡ್ಡ ನೆಕ್ಕುಂದಿ (34), ಕಾಡುಗೋಡಿ (32), ವರ್ತೂರು (24), ಹಗದೂರು (18), ಎಚ್‌ಎಸ್‌ಆರ್ ಲೇಔಟ್‌ (15), ಹೊರಮಾವು (14), ಹೂಡಿ (14), ವಿಜಯನಗರ (10) ಹಾಗೂ ಬೇಗೂರು ವಾರ್ಡ್‌ನಲ್ಲಿ (10) ದೈನಂದಿನ ಪ್ರಕರಣಗಳ ಸರಾಸರಿ ಅಧಿಕವಿದೆ. ಈ ವಾರ್ಡ್‌ಗಳಲ್ಲಿ ನೂರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.

ಬನಶಂಕರಿ ದೇವಾಲಯ, ಹೊಸಕೆರೆಹಳ್ಳಿ, ಕೆಂಗೇರಿ, ಗಾಳಿ ಆಂಜನೇಯ ದೇವಾಲಯ, ಛಲವಾದಿಪಾಳ್ಯ, ರಾಯಪುರ, ಪಾದರಾಯನಪುರ, ಬಾಪೂಜಿನಗರ, ನಾಯಂಡನಹಳ್ಳಿ ಹಾಗೂ ಮಾರುತಿ ಮಂದಿರ ವಾರ್ಡ್‌ನಲ್ಲಿ ವಾರದಿಂದ ದೈನಂದಿನ ಸರಾಸರಿ ಶೂನ್ಯವಿದೆ.

ದಾಖಲಾತಿ ಹೆಚ್ಚಳ:ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಳದಿಂದ ಆಸ್ಪತ್ರೆ ದಾಖಲಾತಿಯೂ ಕೊಂಚ ಏರಿಕೆಯಾಗಿದೆ. ಸದ್ಯ 42 ಮಂದಿ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ.ಸೋಂಕಿತರಲ್ಲಿ 34 ಮಂದಿ ಸಾಮಾನ್ಯ ಹಾಸಿಗೆ, ಐವರು ಐಸಿಯು ಹಾಸಿಗೆ ಹಾಗೂ ಮೂವರು ಎಚ್‌ಡಿಯು ಹಾಸಿಗೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ದೈನಂದಿನ ಕೋವಿಡ್ ಪರೀಕ್ಷೆಗಳ ಸಂಖ್ಯೆ 16 ಸಾವಿರದ ಗಡಿ ದಾಟಿದೆ. ಸೋಂಕು ದೃಢ ಪ್ರಮಾಣ ಶೇ 4ಕ್ಕೆ ತಲುಪಿದೆ.ಹೊಸ ಪ್ರಕರಣಗಳ ಸಂಖ್ಯೆ 700ರ ಗಡಿಯ ಆಸುಪಾಸಿಗೆ ಏರಿಕೆಯಾಗಿದ್ದರೂ ಸೋಂಕಿತರಲ್ಲಿ ಪ್ರತಿನಿತ್ಯ ನಾಲ್ಕರಿಂದ ಐದು ಮಂದಿ ಮಾತ್ರಆಸ್ಪತ್ರೆಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ದಾಖಲಾಗುತ್ತಿರುವ ಹೆಚ್ಚಿನವರಿಗೆ ಸಾಮಾನ್ಯ ಹಾಸಿಗೆಗಳಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಟ್ಟಿರುವ 2,395 ಹಾಸಿಗೆಗಳಲ್ಲಿ 2,353 ಹಾಸಿಗೆಗಳು ಖಾಲಿ ಉಳಿದಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದಚಿಕಿತ್ಸಾ ನಿರ್ಧಾರ ಕೇಂದ್ರಗಳಲ್ಲಿ (ಟ್ರಯಾಜ್ ಸೆಂಟರ್)ಸೋಂಕಿತರನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ. ನಗರದಲ್ಲಿ 48 ಟ್ರಯಾಜ್ ಸೆಂಟರ್‌ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT