ಸೋಮವಾರ, ಮಾರ್ಚ್ 1, 2021
20 °C
ಕೊರೊನಾ ಕಾಡಲ್ಲ ಎಂಬ ವಿಶ್ವಾಸ; ಶಾಸಕ ಎಸ್.ಎ.ರಾಮದಾಸ್

ಮೈಸೂರು: ವಾರಿಯರ್ಸ್‌ಗೆ ಸನ್ಮಾನದ ಹೂಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮೈಸೂರು ಶೀಘ್ರದಲ್ಲೇ ಕೊರೊನಾ ಮುಕ್ತ ಜಿಲ್ಲೆಯಾಗಲಿದೆ’ ಎಂದು ಶಾಸಕ ಎಸ್.ಎ.ರಾಮದಾಸ್ ಭರವಸೆ ವ್ಯಕ್ತಪಡಿಸಿದರು.

ಕೋವಿಡ್–19 ವಾರಿಯರ್ಸ್‌ಗಳಿಗೆ ಮಂಗಳವಾರ ನಗರದ ರಾಮಾನುಜ ರಸ್ತೆಯಲ್ಲಿರುವ ಫೀವರ್ ಕ್ಲಿನಿಕ್‌ನಲ್ಲಿ ಹೂಮಳೆಗರೆದು ಸನ್ಮಾನಿಸಿ ಗೌರವಿಸಿದರು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್ ಹಾಗೂ ಆಸ್ಪತ್ರೆಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರ ಸೇವೆ ಶ್ಲಾಘನಾರ್ಹವಾದುದು ಎಂದರು.

ಸೋಂಕು ಕಾಣಿಸಿಕೊಂಡ ದಿನದಿಂದಲೂ ಜಿಲ್ಲಾಡಳಿತ ಅಹರ್ನಿಶಿ ಶ್ರಮಿಸುತ್ತಿದೆ. ಮುನ್ನೆಚ್ಚರಿಕೆಯ ಕ್ರಮದಿಂದ ಆದಷ್ಟು ಶೀಘ್ರದಲ್ಲೇ ಕೆಂಪು ವಲಯದಿಂದ ಮೈಸೂರು ಹೊರ ಬರಲಿದೆ ಎಂದು ಹೇಳಿದರು.

ಮೈಸೂರಿನ ಕೋವಿಡ್-19 ಫೀವರ್ ಕ್ಲಿನಿಕ್‌ಗಳಾದ ಅಕ್ಕಮ್ಮಣಿ ಆಸ್ಪತ್ರೆ, ಚಾಮುಂಡಿಪುರಂ ಮತ್ತು ಎಂ.ಎಂ.ಕೆ. (ಮೈಸೂರು ಮಕ್ಕಳ ಕೂಟ) ಕೇಂದ್ರಗಳಿಗೆ ಭೇಟಿ ನೀಡಿ, ಸೇವೆಯಲ್ಲಿದ್ದ ತಂಡಕ್ಕೆ ಶಾಸಕರು ಸನ್ಮಾನ ಮಾಡಿದರು.

‘‌ಕೋವಿಡ್, ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಸೇವೆಗೈಯುತ್ತಿರುವವರನ್ನು ಸನ್ಮಾನಿಸುವುದು ದೊಡ್ಡ ಕೆಲಸವಲ್ಲ. ಅದಕ್ಕಿಂತಲೂ ಈ ವಾರಿಯರ್ಸ್‌ಗಳು ತಮ್ಮ ಜೀವವನ್ನೇ ಮುಡಿಪಾಗಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಶಾಸಕ ರಾಮದಾಸ್ ತಿಳಿಸಿದರು.

ವಿದ್ಯಾರ್ಥಿ ಕೊಡುಗೆ

ವಾರಿಯರ್ಸ್‌ಗಳನ್ನು ಸನ್ಮಾನಿಸುವ ಸಂದರ್ಭ ಶಾಸಕರಿಗೆ ಜೆ.ಪಿ.ನಗರದ ಜೆಎಸ್‌ಎಸ್‌ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಪ್ರತೀಕ್ ಭಾರದ್ವಜ್ ತಾನು ಕೂಡಿಟ್ಟಿದ್ದ ₹ 1506 ನಗದನ್ನು ಶಾಸಕರಿಗೆ ಪಿ.ಎಂ.ಕೇರ್ ಫಂಡ್‌ಗೆ ನೀಡಲು ಕೊಟ್ಟಿದ್ದು ವಿಶೇಷವಾಗಿತ್ತು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು, ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಸೌಮ್ಯಾ ಉಮೇಶ್, ಪ್ರಮುಖರಾದ ಮೈ.ಪು.ರಾಜೇಶ್, ಬಾಲಕೃಷ್ಣ, ಸಂತೋಷ್ (ಶಂಭು), ವೆಲ್ಡಿಂಗ್ ಸಂತೋಷ್, ಸೇಫ್‌ವೀಲ್ಸ್‌ನ ಪ್ರಶಾಂತ್, ಭಾಸ್ಕರ್, ಹೇಮಂತ್, ವಿಜಯ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು