ಮಂಗಳವಾರ, ಮೇ 17, 2022
29 °C

ಕ್ರಿಕೆಟ್ ಬೆಟ್ಟಿಂಗ್; ₹ 3 ಲಕ್ಷ ನಗದು ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಗ್‌ಬ್ಯಾಶ್ ಲೀಗ್ ಸರಣಿಯ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಡಿ ಅನಿಸ್ ಬಾಷಾ (27) ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಕೆ.ಆರ್.ಪುರದ ಬಚ್ಚಪ್ಪ ಲೇಔಟ್ ನಿವಾಸಿಯಾದ ಆರೋಪಿ ಅನಿಸ್, ಮೊಬೈಲ್ ಆ್ಯಪ್‌ ಹಾಗೂ ಜಾಲತಾಣಗಳ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಅವರಿಂದ ₹ 3 ಲಕ್ಷ ನಗದು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಬಿಗ್‌ಬ್ಯಾಶ್ ಲೀಗ್ ಸರಣಿ ಆರಂಭವಾದಾಗಿನಿಂದಲೂ ಆರೋಪಿ, ಕ್ರಿಕೆಟ್ ಪಂದ್ಯಗಳ ಸೋಲು ಹಾಗೂ ಗೆಲುವು ಲೆಕ್ಕಾಚಾರಕ್ಕೆ ಸಾರ್ವಜನಿಕರಿಂದ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ, ಕೆ.ಆರ್.ಪುರ ಠಾಣೆ ವ್ಯಾಪ್ತಿಯ ಅಯ್ಯಪ್ಪನಗರದ ಮುಖ್ಯರಸ್ತೆಯಲ್ಲಿ ಆರೋಪಿಯನ್ನು ಬಂಧಿಸಲಾಯಿತು’ ಎಂದೂ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು