ಫ್ಯಾಕ್ಟರಿ ಮಾಲೀಕನಿಗೆ ಥಳಿತ

7

ಫ್ಯಾಕ್ಟರಿ ಮಾಲೀಕನಿಗೆ ಥಳಿತ

Published:
Updated:

ಬೆಂಗಳೂರು: ಕೆಲಸ ಕೊಟ್ಟು ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದ ಮಾಲೀಕನ ಮೇಲೆ ಮಾನವೀಯತೆ ತೋರಿಸದೆ ಕಾರ್ಮಿಕ
ನೊಬ್ಬ ಹಾಡಹಗಲೇ ಕಾರ್ಖಾನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ 
ದಾಖಲಾಗಿದೆ.

ಗಾರ್ವೆ ಬಾವಿಪಾಳ್ಯದ ನಿವಾಸಿ ಆನಂದರೆಡ್ಡಿ ಅವರು‌‌ ಹಲ್ಲೆಗೊಳಗಾಗಿದ್ದು, ಆರೋಪಿ ಮದನ್ ಮತ್ತು ಸಹಚರರು ತಲೆಮರೆಸಿಕೊಂಡಿ
ದ್ದಾರೆ.‌ 15 ವರ್ಷಗಳಿಂದ ತಿರುಮಲ ವಾಟರ್ ಫ್ಯಾಕ್ಟರಿಯ ಮಾಲೀಕ ರಾಗಿರುವ ಆನಂದರೆಡ್ಡಿ ಅವರಿಗೆ 3 ತಿಂಗಳ ಹಿಂದೆ ಕಾರು ಚಾಲಕನಾಗಿ ಆರೋಪಿ ಸೇರಿ ಕೊಂಡಿದ್ದ. ಹಲವು ದಿನಗಳ ನಂತರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಅಸಭ್ಯವಾಗಿ ನಿಂದಿಸಿದ್ದ.‌ ಈತನ ಅನುಚಿತ ವರ್ತನೆ ತಿಳಿದ ಮಾಲೀಕರು ಕೆಲಸದಿಂದ ತೆಗೆದುಹಾಕಿದರು.

ಇದಕ್ಕೆ ಕುಪಿತಗೊಂಡ ಆರೋಪಿ, ಲಾಂಗ್ ಹಿಡಿದು ಕಾರ್ಖಾನೆಗೆ ನುಗ್ಗಿ, ಅಲ್ಲಿದ್ದ ವಸ್ತುಗಳನ್ನು‌ ಪುಡಿಪುಡಿ ಮಾಡಿದ್ದಾನೆ. ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !