ಬುಧವಾರ, ಅಕ್ಟೋಬರ್ 16, 2019
26 °C

ನಾಡ ಪಿಸ್ತೂಲ್‌ ಸಹಿತ ಇಬ್ಬರ ಬಂಧನ

Published:
Updated:

ಬೆಂಗಳೂರು: ಮಾದಕ ವಸ್ತು ಮತ್ತು ನಾಡ ಪಿಸ್ತೂಲ್ ಸಹಿತ ಇಬ್ಬರನ್ನು ಕೆ.ಜಿ. ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ. ಹಳ್ಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಮುಬಾರಕ್ ಪಾಷಾ (25) ಮತ್ತು ಮಾರುತಿನಗರದ ಅಭಿಷೇಕ್ (21) ಬಂಧಿತರು. ಬಂಧಿತರಿಂದ ಎರಡು ನಾಡ ಪಿಸ್ತೂಲ್ ಹಾಗೂ ಸುಮಾರು ಏಳು ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ನಾಡ ಪಿಸ್ತೂಲ್‌ಗಳನ್ನು ಎಲ್ಲಿಂದ ತರಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದರು.

ಬಿಡಿಎ ಕಾಂಪ್ಲೆಕ್ಸ್ ಬಳಿ ಸೂಟ್‌ಕೇಸ್ ಹಿಡಿದುಕೊಂಡು ಆರೋಪಿಗಳು ಓಡಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸೂಟ್‌ಕೇಸ್‌ನಲ್ಲಿ ಎಂಟು ಬಂಡಲ್‌ಗಳಲ್ಲಿ 7 ಕೆಜಿ 350 ಗ್ರಾಂ ಗಾಂಜಾ, ತೂಕ ಮಾಡುವ ಎಲೆಕ್ಟ್ರಾನಿಕ್ ಯಂತ್ರ, ಎರಡು ನಾಡ ಪಿಸ್ತೂಲ್ ಮತ್ತು ಜೀವಂತ 13 ಗುಂಡುಗಳು ಪತ್ತೆಯಾಗಿದೆ. ‌ಆರೋಪಿಗಳ ವಿರುದ್ಧ ಅಕ್ರಮ ಮಾದಕ ವಸ್ತು ಸಾಗಣೆ ಹಾಗೂ ಶಸ್ತ್ರಾಸ್ತ್ರ ಸಾಗಣೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐಎಎಸ್‌, ಕೆಎಎಸ್‌ ತರಬೇತಿ

ಡಾ. ವಿಷ್ಣು ಸೇನಾ ಸಮಿತಿ ಮತ್ತು ಸಾಧನಾ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ಐಎಎಸ್‌ ಮತ್ತು ಕೆಎಎಸ್‌ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರವೇಶ ಪರೀಕ್ಷೆ ಇದೇ 13ರಂದು ವಿಜಯನಗರದ ಎಂ.ಸಿ ಬಡಾವಣೆಯ ಪಿ.ವಿ ಪ್ಲಾಜಾದಲ್ಲಿ ನಡೆಯಲಿದೆ. ಅ.14ರಂದು ಫಲಿತಾಂಶ ಪ್ರಕಟವಾಗಲಿದೆ. ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್‌ ಹಾಗೂ ಇತರ ದಾಖಲೆಗಳೊಂದಿಗೆ ಅ.10ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 9902488801/ 9945125500 ಸಂಪರ್ಕಿಸಬಹುದು.

Post Comments (+)