ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ: ಮಲಯಾಳಂ ಕಿರುತೆರೆ ಸಹನಟ ಸೇರಿ ಮೂವರ ಬಂಧನ

Last Updated 24 ಸೆಪ್ಟೆಂಬರ್ 2022, 5:21 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವ್ಯವಸ್ಥಿತವಾಗಿ ಡ್ರಗ್ಸ್ ಮಾರುತ್ತಿದ್ದ ಜಾಲವನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಭೇದಿಸಿದ್ದು, ಮಲಯಾಳಂ ಕಿರುತೆರೆ ಸಹನಟ ಸೇರಿ ಮೂವರನ್ನು ಬಂಧಿಸಿದ್ದಾರೆ.

‘ಕೇರಳದ ಸಹನಟ ಶಿಯಾಜ್, ಮೊಹಮ್ಮದ್ ಶಾಹಿದ್ ಹಾಗೂ ಮಂಗಲ್ ತೋಡಿ ಜಿತೀನ್ ಬಂಧಿತರು. ಇವರಿಂದ ₹ 12.50 ಲಕ್ಷ ಮೌಲ್ಯದ ಎಂಡಿಎಂಎ ಹಾಗೂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳಾದ ಶಾಹಿದ್, ಜಿತಿನ್ ಇಬ್ಬರೂ ಬಿ.ಕಾಂ ಪದವೀಧರರು. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಮೊಬೈಲ್‌ ಮಳಿಗೆಯೊಂದರಲ್ಲಿ ಶಾಹಿದ್ ಕೆಲಸಕ್ಕೆ ಸೇರಿದ್ದರು. ಸಂಬಳ ಕಡಿಮೆ ಎಂಬ ಕಾರಣಕ್ಕೆ ಜಿತಿನ್ ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇವರಿಬ್ಬರಿಗೆ ಶಿಯಾಜ್ ಪರಿಚಯವಾಗಿತ್ತು. ಮೂವರೂ ಸೇರಿ ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದರು’ ಎಂದು ತಿಳಿಸಿದರು.

‘ಆರೋಪಿಗಳು ಕೇರಳ ಹಾಗೂ ಇತರೆ ರಾಜ್ಯಗಳಿಂದ ನಗರಕ್ಕೆ ಡ್ರಗ್ಸ್ ತರಿಸುತ್ತಿದ್ದರು. ಕೆಲ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಕೆಲ ಕಾರ್ಮಿಕರಿಗೆ ಡ್ರಗ್ಸ್ ಮಾರುತ್ತಿದ್ದರು. ಇದರಿಂದ ಬಂದ ಹಣವನ್ನೂ ಮೂವರು ಹಂಚಿಕೊಂಡು, ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದು ಹೇಳಿದರು.

‘ಕೆಲ ಉದ್ಯಮಿಗಳು ಹಾಗೂ ಕೆಲ ವ್ಯಾಪಾರಿಗಳ ಜೊತೆಯಲ್ಲೂ ಆರೋಪಿಗಳು ಸಂಪರ್ಕ ಇಟ್ಟುಕೊಂಡಿದ್ದರು. ನಗರದ ಹಲವೆಡೆ ನಡೆಯುತ್ತಿದ್ದ ರಾತ್ರಿ ಪಾರ್ಟಿಗಳಿಗೂ ಆರೋಪಿಗಳು ಡ್ರಗ್ಸ್ ಪೂರೈಸುತ್ತಿದ್ದ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT