ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.25 ಕೋಟಿ ಮೌಲ್ಯದ ಡ್ರಗ್ಸ್‌ ವಶ, ನಾಲ್ವರು ಬಂಧನ 

Last Updated 29 ಜುಲೈ 2020, 8:42 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪಬ್‍ಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಕೇರಳ ಮೂಲದ ನಾಲ್ವರು ಡ್ರಗ್ ಡೀಲರ್‍ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು,₹1.25 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

ಶಹದ್ ಮೊಹಮ್ಮದ್(24), ಕೆ.ಅಜ್ಮಲ್ (22) , ಅಜಿನ್ ಕೆ.ಜಿ.ವರ್ಗೀಸ್ (21) ಹಾಗೂ ನಿತಿನ್ ಮೋಹನ್ (29) ಬಂಧಿತರು. ಆರೋಪಿಗಳು ನಗರದ ಪಬ್‍ಗಳಲ್ಲಿ ಡಿಜೆಗಳಾಗಿ ಕೆಲಸ ಮಾಡುತ್ತಿದ್ದರು. ಪಬ್‍ಗೆ ಬರುವ ಗ್ರಾಹಕರಿಗೆ ಇವರು ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಮಾದಕವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಸೋಲದೇವನಹಳ್ಳಿ ಹಾಗೂ ಚಿಕ್ಕಬಾಣಾವರದ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಎರಡು ಸಾವಿರ ಎಲ್‍ಎಸ್‍ಡಿ ಸ್ಟಿಪ್ಸ್, 110 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, 10 ಎಕ್ಸ್‍ಟೆಸಿ ಮಾತ್ರೆಗಳು, 5 ಕೆ.ಜಿ. ಗಾಂಜಾ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ 5 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಧೀರಜ್ ಎಂಬಾತ ಇವರ ಸಹಾಯದಿಂದ ಡ್ರಗ್ಸ್ ಮಾರುತ್ತಿದ್ದರು. ಡಾರ್ಕ್ ವೆಬ್ (ಪೋಸ್ಟಲ್) ಮೂಲಕ ವಿದೇಶಗಳಿಂದ ಮಾದಕ ವಸ್ತುಗಳನ್ನು ತರಿಸಿಕೊಂಡು, ಬೆಂಗಳೂರು, ಗೋವಾ, ಮುಂಬೈ ಸೇರಿ ವಿವಿಧ ನಗರಗಳಿಗೆ ಸರಬರಾಜು ಮಾಡುತ್ತಿದ್ದರು. ಡಿಜಿಟಲ್ ಮುಂಗಡ ಪಾವತಿ ಮೂಲಕ ಮಧ್ಯವರ್ತಿಗಳ ಸಹಾಯದಿಂದ ಡ್ರಗ್ಸ್ ಮಾರಾಟ ನಡೆಯುತ್ತಿತ್ತು.

ತಲೆಮರೆಸಿಕೊಂಡಿರುವ ಆರೋಪಿ ಧೀರಜ್‍ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ಧ ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿ, ತನಿಖೆ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT