ಸೋಮವಾರ, ಜೂನ್ 27, 2022
28 °C

ಅಪರಿಚಿತ ವ್ಯಕ್ತಿಯಿಂದ ಬಂದಿದ್ದ ಲಿಂಕ್ ಕ್ಲಿಕ್ ಮಾಡಿ ₹1 ಲಕ್ಷ ಕಳೆದುಕೊಂಡ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಪರಿಚಿತ ವ್ಯಕ್ತಿಯಿಂದ ಮೊಬೈಲ್‌ಗೆ ಬಂದಿದ್ದ ಲಿಂಕ್ ಕ್ಲಿಕ್‌ ಮಾಡಿದ್ದ ನಗರದ ಮಹಿಳೆಯೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ ₹ 1.02 ಲಕ್ಷ ಕಳೆದುಕೊಂಡಿದ್ದಾರೆ.

ಬಳ್ಳಾರಿ ರಸ್ತೆಯ ನಿವಾಸಿಯಾಗಿರುವ ಮಹಿಳೆ ವಂಚನೆ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

‘ದೂರುದಾರರಿಗೆ ಕರೆ ಮಾಡಿ ಏಕಾಏಕಿ ಕಡಿತಗೊಳಿಸಿದ್ದ ವ್ಯಕ್ತಿಯೊಬ್ಬರು, ಸಂದೇಶದ ಮೂಲಕ ಲಿಂಕ್ ಕಳುಹಿಸಿದ್ದರು. ಅದು ಏನಿರಬಹುದೆಂಬ ಕುತೂಹಲದೊಂದಿಗೆ ಮಹಿಳೆ ಲಿಂಕ್ ಮೇಲೆ ಕ್ಲಿಕ್‌ ಮಾಡಿದ್ದರು. ಅದಾದ ಕೆಲ ಕ್ಷಣಗಳಲ್ಲೇ ದೂರುದಾರರ ಬ್ಯಾಂಕ್‌ ಖಾತೆಯಿಂದ ₹ 1.02 ಲಕ್ಷ ಕಡಿತವಾಗಿದೆ. ಸೈಬರ್ ವಂಚಕರೇ ಕರೆ ಮಾಡಿ ವಂಚಿಸಿರುವುದಾಗಿ ಮಹಿಳೆ ದೂರಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು