ಶನಿವಾರ, ಸೆಪ್ಟೆಂಬರ್ 25, 2021
24 °C
ಸಾರಿಗೆ ಇಲಾಖೆ ಅಧಿಕಾರಿಗಳಿಂದ ಕಾರ್ಯಾಚರಣೆ

ಸೈಲೆನ್ಸರ್ ವಿರೂಪ: 40 ವಾಹನಗಳ ಮಾಲೀಕರಿಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ಕಶ ಶಬ್ದ ಉಂಟು ಮಾಡುವ ಹಾಗೂ ವಿರೂಪಗೊಳಿಸಿರುವ ಸೈಲೆನ್ಸರ್‌ ಅಳವಡಿಸಿರುವ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಭಾನುವಾರ ಕಾರ್ಯಾಚರಣೆ ನಡೆಸಿ, 40ಕ್ಕೂ ಹೆಚ್ಚು ವಾಹನಗಳ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.

‘ದೇವನಹಳ್ಳಿ ಹಾಗೂ ನೆಲಮಂಗಲ–ಹಾಸನ ಮಾರ್ಗದ ಟೋಲ್‌ ಗೇಟ್‌ಗಳ ಬಳಿ 300 ದ್ವಿಚಕ್ರ ವಾಹನಗಳು ಹಾಗೂ 60 ಕಾರುಗಳ ತಪಾಸಣೆ ನಡೆಸಲಾಯಿತು. ಈ ವೇಳೆ ದೋಷಪೂರಿತ ಸೈಲೆನ್ಸರ್‌ಗಳನ್ನು ಅಳವಡಿಸಿದ್ದ 40ಕ್ಕೂ ಹೆಚ್ಚು ವಾಹನಗಳು ಪತ್ತೆಯಾದವು’ ಎಂದು ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದರು. 

‘ವಾರಾಂತ್ಯಗಳಲ್ಲಿ ಜಾಲಿ ರೈಡ್‌ಗಾಗಿ ವಾಹನಗಳ ಸೈಲೆನ್ಸರ್‌ ವಿರೂಪಗೊಳಿಸಿರುವ ಮಾಹಿತಿ ಲಭ್ಯವಾಗಿತ್ತು. ಹಾಗಾಗಿ, ಭಾನುವಾರ ಬೆಳಿಗ್ಗೆ ಮೂರು ತಂಡಗಳು ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸಿದಾಗ, ದುಬಾರಿ ಕಾರು ಮತ್ತು ಬೈಕ್‌ಗಳಿಗೆ ಸೈಲೆನ್ಸರ್‌ ವಿರೂಪಗೊಳಿಸಿರುವುದು ಕಂಡುಬಂತು’ ಎಂದು ಮೋಟಾರು ವಾಹನ ನಿರೀಕ್ಷಕ ಸುಧಾಕರ್‌ ತಿಳಿಸಿದರು.

‘ಕಾರ್ಯಾಚರಣೆ ವೇಳೆ ಒಂದು ಕಾರನ್ನು ಜಪ್ತಿ ಮಾಡಲಾಗಿದೆ. ಒಂದು ವಾರದೊಳಗೆ ಸೈಲೆನ್ಸರ್‌ ಬದಲಾಯಿಸುವಂತೆ ವಾಹನ ಮಾಲೀಕರಿಗೆ ಸೂಚಿಸಿ, ನೋಟಿಸ್ ನೀಡಲಾಗಿದೆ. ಅದೇ ರೀತಿಯ ಸೈಲೆನ್ಸರ್‌ಗಳ ಬಳಕೆ ಕಂಡುಬಂದರೆ, ವಾಹನಗಳ ನೋಂದಣಿ (ಆರ್‌ಸಿ) ರದ್ದುಗೊಳಿಸುವುದಾಗಿ ಎಚ್ಚರಿಸಲಾಗಿದೆ’ ಎಂದರು.

ಸಾರಿಗೆ ಇಲಾಖೆಯ ಹೆಚ್ಚುವರಿ ಮುಖ್ಯ ಆಯುಕ್ತ ನರೇಂದ್ರ ಹೋಳ್ಕರ್‌ ಹಾಗೂ ಜಂಟಿ ಆಯುಕ್ತ ಹಾಲಪ್ಪಸ್ವಾಮಿ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿತ್ತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.