ಬೆಂಗಳೂರು: ಬಿಲ್ ಪಾವತಿಸುವಂತೆ ಕೇಳಿದ್ದಕ್ಕೆ ಯುವಕರ ಗುಂಪೊಂದು ಪೆಟ್ರೋಲ್ ಸುರಿದು ಡಾಬಾಕ್ಕೆ ಬೆಂಕಿ ಹಚ್ಚಿದ್ದು, ಘಟನೆಯಲ್ಲಿ ಮನೋಜ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ದೊಡ್ಡಬ್ಯಾಲಕೆರೆಯಲ್ಲಿರುವ ಡಾಬಾಕ್ಕೆ ಇದೇ 24ರಂದು ಬಂದಿದ್ದ ನಾಲ್ವರು ಯುವಕರು ಊಟ ಮುಗಿಸಿ ಹರಟುತ್ತಾ ಕುಳಿತಿದ್ದರು. ಡಾಬಾ ಮುಚ್ಚಬೇಕು. ಬಿಲ್ ಪಾವತಿ ಮಾಡಿ ಎಂದು ಸಿಬ್ಬಂದಿಯೊಬ್ಬರು ಮನವಿ ಮಾಡಿದ್ದರು. ಇದರಿಂದ ಕೆರಳಿದ ಯುವಕರು ಸಿಬ್ಬಂದಿ ಜೊತೆ ಜಗಳವಾಡಿ ಅಲ್ಲಿಂದ ಹೋಗಿದ್ದರು. ಎಲ್ಲರೂ ಮಲಗಿದ ಮೇಲೆ ಮತ್ತೆ ಡಾಬಾ ಬಳಿ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

‘ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಮನೋಜ್ಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.