ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮೊಬೈಲ್ ಟವರ್ ಬಾಕ್ಸ್ ಕದ್ದು ಮಾರಾಟ

Last Updated 19 ಜನವರಿ 2023, 22:52 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್ ಟವರ್‌ಗಳಿಗೆ ಅಳವಡಿಸಿದ್ದ ಆರ್‌ಆರ್‌ಯು (ರಿಮೋಟ್ ರೇಡಿಯೊ ಯೂನಿಟ್) ಬಾಕ್ಸ್‌ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕುಂಬಳಗೂಡು ಬಳಿಯ ಚಳ್ಳೇಘಟ್ಟದ ದೀಪಕ್‌ರಾವ್ ಪವಾರ್ (22) ಹಾಗೂ ಜಾನ್‌ ಪಿಂಟೊ (20)
ಬಂಧಿತರು. ಇವರಿಂದ ₹ 11 ಲಕ್ಷ ಮೌಲ್ಯದ 14 ಬಾಕ್ಸ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೂಲಿ ಕಾರ್ಮಿಕರಾದ ಆರೋಪಿಗಳು, ಹಲವು ಕಡೆಗಳಲ್ಲಿ ಬಾಕ್ಸ್‌ಗಳನ್ನು ಕದ್ದಿದ್ದರು. ಒಂದು ಬಾಕ್ಸ್‌ನ ಬೆಲೆ ₹ 75 ಸಾವಿರ. ಆದರೆ, ಆರೋಪಿಗಳು ₹ 5 ಸಾವಿರಕ್ಕೆ ಗುಜರಿ ವ್ಯಾಪಾರಿಗಳಿಗೆ ಮಾರಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT