‘ಕರೋಡಪತಿ’ ನಂಬಿ ₹97 ಸಾವಿರ ಕಳೆದುಕೊಂಡ

7

‘ಕರೋಡಪತಿ’ ನಂಬಿ ₹97 ಸಾವಿರ ಕಳೆದುಕೊಂಡ

Published:
Updated:

ಬೆಂಗಳೂರು: ‘ಕೌನ್ ಬನೇಗಾ ಕರೋಡಪತಿ (ಕೆಬಿಸಿ) ಕಾರ್ಯಕ್ರಮದಿಂದ ₹25 ಲಕ್ಷ ಗೆದ್ದಿದ್ದೀರಾ’ ಎಂಬ ಸಂದೇಶ ಕಳುಹಿಸಿ ನಂಬಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ, ನಗರದ ನಿವಾಸಿ ಸಬ್ರೀನ್ ಎಂಬುವರಿಂದ ₹97 ಸಾವಿರ ಪಡೆದು ವಂಚಿಸಿದ್ದಾನೆ.

ಕಾಡುಗೊಂಡನಹಳ್ಳಿ ನಿವಾಸಿಯಾದ ಸಬ್ರೀನ್‌ ಅವರ ವಾಟ್ಸ್‌ಆ್ಯಪ್‌ಗೆ ಸೆಪ್ಟೆಂಬರ್‌ 2ರಂದು ಅಪರಿಚಿತನೊಬ್ಬ ‘ನಿಮಗೆ ₹25 ಲಕ್ಷ ಬಹುಮಾನ ಬಂದಿದೆ. ಅದನ್ನು ನಿಮ್ಮ ಖಾತೆಗೆ ಜಮೆ ಮಾಡುತ್ತೇವೆ. ಅದಕ್ಕೂ ಮುನ್ನ ಕೆಲವು ಶುಲ್ಕಗಳನ್ನು ಪಾವತಿ ಮಾಡಿ’ ಎಂಬ ಸಂದೇಶ ಕಳುಹಿಸಿದ್ದ ಎಂದು ಪೊಲೀಸರು ಹೇಳಿದರು.

ಆತನ ಮಾತು ನಂಬಿದ್ದ ಸಬ್ರೀನ್, ಆರೋಪಿ ನೀಡಿದ್ದ ಬ್ಯಾಂಕ್‌ ಶಾಖೆಗಳ ಖಾತೆಗಳಿಗೆ ಹಂತ ಹಂತವಾಗಿ ₹97 ಸಾವಿರ ಜಮೆ ಮಾಡಿದ್ದಾರೆ. ಅದಾದ ನಂತರ ಆರೋಪಿ, ಮೊಬೈಲ್ ಸ್ವಿಚ್ಡ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದಾನೆ ಎಂದರು.

‘ಕೆಬಿಸಿ ಕಾರ್ಯಕ್ರಮದ ಹೆಸರಿನಲ್ಲಿ ಸಂದೇಶಗಳು ಹರಿದಾಡುತ್ತಿವೆ. ಅವುಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಅನುಮಾನವಿದ್ದರೆ ಹತ್ತಿರದ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಪೊಲೀಸರು ತಿಳಿಸಿದರು.  

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !