ಶುಕ್ರವಾರ, ಜುಲೈ 30, 2021
27 °C
11 ವರ್ಷಗಳಿಂದ ಹೂಳು ತುಂಬಿದ್ದ ಕೊಳ * ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ

ಕಬ್ಬನ್ ಉದ್ಯಾನ: ಕಮಲದ ಕೊಳಕ್ಕೆ ‘ಸ್ಮಾರ್ಟ್‌’ ಸ್ಪರ್ಶ

ಮನೋಹರ್ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿರುವ ‘ಕಮಲದ ಕೊಳ’ದ ನವೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಆರಂಭ ಗೊಂಡಿದ್ದು, ಕೊಳ ಶೀಘ್ರದಲ್ಲೇ ಹೊಸ ರೂಪ ತಾಳಲಿದೆ.

ಬಾಲಭವನದ ಸಮೀಪ ಇರುವ ಕಮಲದ ಕೊಳವು ಉದ್ಯಾನದ ಪ್ರಮುಖ ಆಕರ್ಷಣೆ ಯಾಗಿತ್ತು.  ‘ದ್ರೋಣ’ ಹೆಸರಿನ ಆಮೆ, ಮೀನುಗಳು ಹಾಗೂ 250ಕ್ಕೂ ಬಗೆಯ ಪಕ್ಷಿಗಳ ಆವಾಸಸ್ಥಾನವೂ ಇದಾಗಿತ್ತು. ಈ ಎಲ್ಲ ವಿಶೇಷ ಗಳಿಂದ ಕೊಳ ಸಾರ್ವಜನಿಕರನ್ನು ಸೆಳೆ ಯುತ್ತಿತ್ತು. ಆದರೆ, ಕ್ರಮೇಣ ಹೂಳು ತುಂಬಿಕೊಂಡು  11 ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲಿತ್ತು.

ಕಬ್ಬನ್‌ ಉದ್ಯಾನದಲ್ಲಿ ಎರಡು ಹಂತಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳಿಗೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲ ಹಂತ ದಲ್ಲೇ ಕಮಲದ ಕೊಳದ ಅಭಿವೃದ್ಧಿಗೆ ಮುಂದಾಗಿತ್ತು. ಕಳೆದ ವರ್ಷವೇ ಆರಂಭವಾಗಬೇಕಿದ್ದ ಕಾಮಗಾರಿಗಳು ಕೋವಿಡ್‌ನಿಂದ ವಿಳಂಬವಾಗಿದ್ದವು. ಸದ್ಯ ಕೊಳದಲ್ಲಿ ಸಂಗ್ರಹವಾಗಿದ್ದ ಹೂಳು ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ.

‘ಕೊಳಕ್ಕೆ ಬಿದಿರು ಸಸಿಗಳ ನಡುವೆ ಮಳೆ ನೀರನ್ನು ನೇರವಾಗಿ ಹರಿಸಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ  ಕೊಳಕ್ಕೆ ಸಂಪರ್ಕಿಸುವ ಸಣ್ಣ ಕಾಲುವೆಯೊಂದನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಹಂತ ಹಂತವಾಗಿ ನೀರು ಹರಿಯಲಿದೆ. ಇದನ್ನು ಮತ್ತಷ್ಟು ಅಂದಗೊಳಿಸಲು ಕಾಲುವೆಗೆ ಅಡ್ಡವಾಗಿ ಒಂದು ಕಿರುಸೇತುವೆ ನಿರ್ಮಿಸ ಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಬಾಲಕೃಷ್ಣ ತಿಳಿಸಿದರು.

‘ಕೊಳದಲ್ಲಿ ಭಾರಿ ಪ್ರಮಾಣದ ಹೂಳು ಸಂಗ್ರಹವಾಗಿತ್ತು. ಅದನ್ನು ತೆರವು ಮಾಡಲಾಗುತ್ತಿದೆ.ಈಚೆಗೆ ಸುರಿದ ಮಳೆಯಿಂದ ನೀರು ತುಂಬಿದೆ. ಅದನ್ನು ತೆರವು ಮಾಡುವ ಮೂಲಕ ಕೊಳ ನವೀಕರಿಸಲಾಗುವುದು. ಕಮಲದ ಕೊಳ ಹೆಚ್ಚು ಆಕರ್ಷಣೀಯ ವಾಗಿರಲಿದೆ’ ಎಂದರು.

ಕಾಂಕ್ರೀಟುಮುಕ್ತ ಕಾಮಗಾರಿಗೆ ಆದ್ಯತೆ: ‘ಅಂದಾಜು ₹1.5 ಕೋಟಿ ವೆಚ್ಚದಲ್ಲಿ ಕಮಲದ ಕೊಳದ ಅಭಿವೃದ್ಧಿಯನ್ನು ಕಾಂಕ್ರೀಟುಮುಕ್ತವಾಗಿ ನಡೆಸಲು ಉದ್ದೇಶಿಸಲಾಗಿದೆ. ಸಾಧ್ಯವಾದಷ್ಟು ನೈಸರ್ಗಿಕ ರೂಪ‍ದಲ್ಲೇ ನವೀಕರಣ ಮಾಡಲಾಗುವುದು. ಕಾಲುವೆ ಬದಿಗಳು, ಕೊಳದ ಖಾಲಿ ಜಾಗ ಗಳಲ್ಲಿ ಅಲಂಕಾರಿಕ ಕಲ್ಲುಗಳನ್ನು ಜೋಡಿಸಲಾಗುವುದು’ ಎಂದು ಸ್ಮಾರ್ಟ್‌ಸಿಟಿ ಯೋಜನೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿ ದರು.

‘ಕೊಳದ ಸುತ್ತಲೂ ಜನರ ಓಡಾ ಟಕ್ಕೆ ಪಾದಚಾರಿ ಮಾರ್ಗ ಹಾಗೂ ರಕ್ಷಣಾ ಬೇಲಿ ಸಿದ್ಧವಾಗಲಿದೆ.  ಕೊಳ ದಲ್ಲಿ ವಿವಿಧ ತಳಿಯ ಕಮಲದ ಸಸಿ ಗಳನ್ನು ಬೆಳೆಸಲಾಗುವುದು. ಕೊಳದ ಮಧ್ಯಭಾಗದಲ್ಲಿ ಎತ್ತರಕ್ಕೆ ನೀರು ಚಿಮ್ಮುವ ಕಾರಂಜಿ ಅಳವಡಿಸಲಾಗು ವುದು. ಆಮ್ಲಜನಕ ಪೂರಣ ಸಾಧನ ಅಳವಡಿಕೆ ಹಾಗೂ ನೀರು ಶುದ್ಧೀಕರಣ ಯಂತ್ರವೂ ಇರಲಿದೆ. ಕಾಲುವೆ ನಿರ್ಮಿ ಸುವ ಜಾಗದಲ್ಲಿ ಬಿದಿರು ಸಸಿಗಳಿದ್ದು, ಅವುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗುವುದು’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.