ಬುಧವಾರ, ಆಗಸ್ಟ್ 21, 2019
27 °C

‘ಯೋಜನೆ ಮುಂದುವರಿಸಿ’

Published:
Updated:

ಬೆಂಗಳೂರು: ಸಾಂಸ್ಕೃತಿಕ ಅಕಾಡೆಮಿ ಗಳು ಪ್ರಾರಂಭಿಸಿದ್ದ ಯೋಜನೆಗಳನ್ನು ಮುಂದುವರಿಸುವಂತೆ ಕರ್ನಾಟಕ ನಾಟಕ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಜೆ. ಲೋಕೇಶ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಆರ್. ಜನ್ನು ಅವರಿಗೆ ಮನವಿ ಮಾಡಿದ್ದಾರೆ. 

‘ಅಕಾಡೆಮಿಗಳು ಸ್ವಾಯತ್ತ ಸಂಸ್ಥೆ ಯಾಗಿದ್ದು, ನೀತಿ ನಿರೂಪಣೆಯ ಜವಾಬ್ದಾರಿ ಅವುಗಳ ಅಧ್ಯಕ್ಷರದ್ದಾಗಿರುತ್ತದೆ. ಅದೇ ರೀತಿ, ಆಡಳಿತಾತ್ಮಕ ನಿರ್ವಹಣೆಯ ಹೊಣೆ ಸರ್ಕಾರ ನೇಮಿ ಸಿದ ರಿಜಿಸ್ಟ್ರಾರ್‌ಗಳದ್ದು. ಹಾಗಾಗಿ ಯೋಜನೆಗಳನ್ನು ಮುಂದುವರಿಸುವ ಬಗ್ಗೆ ಇಲಾಖೆಯ ಹಸ್ತಕ್ಷೇಪ ಅನಗತ್ಯ. ಇದೀಗ ಅಕಾಡೆಮಿಗಳ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿರುವ ತಾವು ನೇರವಾಗಿ ಅಕಾಡೆಮಿ ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸಿ, ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. 

Post Comments (+)