ಶುಕ್ರವಾರ, ಸೆಪ್ಟೆಂಬರ್ 20, 2019
21 °C

₹ 50 ಲಕ್ಷ ಮೌಲ್ಯದ ವಿದೇಶಿ ಸಿಗರೇಟ್‌ ಜಪ್ತಿ

Published:
Updated:

ಬೆಂಗಳೂರು: ಪಶ್ಚಿಮ ಬಂಗಾಳದ ಅಗರ್ತಲದಿಂದ ನಗರಕ್ಕೆ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹50 ಲಕ್ಷ ಮೌಲ್ಯದ ವಿದೇಶಿ ತಯಾರಿಕೆ ಸಿಗರೇಟ್‌ಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

‘ಬಾತ್ಮಿದಾರರು ನೀಡಿದ್ದ ಮಾಹಿತಿಯಂತೆ ತಪಾಸಣೆ ನಡೆಸಲಾಯಿತು. ವಿವಿಧ ವಿದೇಶಿ ಕಂಪನಿಗಳ 12 ಸಿಗರೇಟ್‌ ಬಾಕ್ಸ್‌ಗಳು ಪತ್ತೆಯಾದವು. ಇವುಗಳನ್ನು ಕಳುಹಿಸಿದವರು ಯಾರೆಂದು ಪತ್ತೆ ಮಾಡುತ್ತಿದ್ದೇವೆ’ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.  ‘ಸಿಗರೇಟ್‌ ಮತ್ತಿತರ ತಂಬಾಕು ಪದಾರ್ಥಗಳ ಪ್ಯಾಕೇಜಿಂಗ್‌ ಹಾಗೂ ಲೇಬಲಿಂಗ್‌ ತಿದ್ದುಪಡಿ ಕಾಯ್ದೆ 2017ರ ಅನ್ವಯ ಸಿಗರೇಟ್‌ಗಳ ಅಕ್ರಮ ಮಾರಾಟ ನಿಷೇಧಿಸಲಾಗಿದೆ. ರಾಜ್ಯಕ್ಕೆ ಅಕ್ರಮವಾಗಿ ಬರುವ ಪದಾರ್ಥಗಳ ಮೇಲೆ ಕಸ್ಟಮ್ಸ್‌ ಇಲಾಖೆ ನಿಗಾ ವಹಿಸಿದೆ’ ಎಂದು ಮೂಲಗಳು ಹೇಳಿವೆ. 

Post Comments (+)