ಮಂಗಳವಾರ, ಆಗಸ್ಟ್ 20, 2019
21 °C
ಯುವತಿಯಿಂದ ದೂರು; ಆರೋಪಿ ಬಂಧನ

ಗೆಳತಿ ಫೋಟೊ: ಬ್ಲ್ಯಾಕ್‌ಮೇಲ್

Published:
Updated:
Prajavani

ಬೆಂಗಳೂರು: ಯುವತಿಯೊಂದಿಗಿನ ಖಾಸಗಿ ಕ್ಷಣದ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಕಿರಣ್ (23) ಎಂಬಾತನನ್ನು ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಾಣಸವಾಡಿಯ ಈರಪ್ಪ ಬಡಾವಣೆ ನಿವಾಸಿ ಕಿರಣ್, ನಗರದ ಹೇರ್‌ ಸಲೂನೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತನ ಸಹೋದ್ಯೋಗಿ ಯುವತಿಯೇ ದೂರು ನೀಡಿದ್ದರು.

ಎರಡು ವರ್ಷದ ಪರಿಚಯ: ‘ಆರೋಪಿ ಹಾಗೂ ಸಂತ್ರಸ್ತೆ, ಎರಡು ವರ್ಷಗಳಿಂದ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಬ್ಬರ ನಡುವೆ ಸ್ನೇಹ ಏರ್ಪಟ್ಟಿತ್ತು. ಎರಡು ತಿಂಗಳಿನಿಂದ ಸಲುಗೆಯೂ ಬೆಳೆದಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಅವರಿಬ್ಬರೂ ಎರಡು ಮೂರು ಬಾರಿ ಖಾಸಗಿ ಕ್ಷಣ ಕಳೆದಿದ್ದರು. ಆರೋಪಿ, ಮೊಬೈಲ್‌ನಲ್ಲಿ ಫೋಟೊ ಕೂಡ ಕ್ಲಿಕ್ಕಿಸಿಕೊಂಡಿದ್ದ. ಇತ್ತೀಚೆಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಸಿಟ್ಟಾದ ಆರೋಪಿ, ಖಾಸಗಿ ಕ್ಷಣಗಳ ಫೋಟೊಗಳನ್ನು ಯುವತಿಯ ಸಂಬಂಧಿಕರಿಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದ ಎಂದು ಮೂಲಗಳು ಹೇಳಿವೆ.  

Post Comments (+)