ಬೆಂಗಳೂರು: ‘ಸಾಂಸ್ಕೃತಿಕ ಲೋಕದ ಸಿನಿಕತನ ಅತ್ಯಂತ ಅಪಾಯಕಾರಿ. ಅದು ನಮ್ಮ ಅಂತರಂಗ ಹಾಳು ಮಾಡಿ, ಬಹಿರಂಗ ಭ್ರಷ್ಟಗೊಳಿಸುತ್ತದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಸ್ವಾಭಿಮಾನಿ ಕರ್ನಾಟಕ ವೇದಿಕೆ ಶುಕ್ರವಾರ ಆಯೋಜಿಸಿದ್ದ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಿನಿಕತನ ಎಂಬುದು ಗೊತ್ತಾಗುವುದಿಲ್ಲ. ಬರೆದಿರುವುದೆಲ್ಲಾ ಶ್ರೇಷ್ಠ ಮತ್ತು ಉತ್ತಮ ಎಂಬ ಭ್ರಮೆ ಇರಬಾರದು. ಅದರಿಂದ ಹೊರಗೆ ಬರಬೇಕಾಗಿದೆ’ ಎಂದರು.

ಪ್ರಶಸ್ತಿ ಮತ್ತು ಮನ್ನಣೆ ದೊರೆತ ವೇಳೆ ಯುವ ಜನರು ಏನಾಗಿದ್ದಾರೆ ಎಂಬುದನ್ನು ಹಿಂತಿರುಗಿ ನೋಡಬೇಕು. ಅದ್ಬುತವಾಗಿ ಬೆಳೆಯಬೇಕಾದವರು ಸಿನಿಕತನಕ್ಕೆ ಒಳಗಾಗಿ ಏನಾದರು ಎಂಬುದಕ್ಕೆ ಅನೇಕ ನಿರ್ದಶನಗಳು ಕಣ್ಮುಂದೆ ಇವೆ. ಸಿನಿಕತನ ಅತ್ಯಂತ ಅಪಾಯಕಾರಿ ಎಂದು ಹೊಸ ಹಾಗೂ ಹಳೆ ತಲೆಮಾರಿನವರು ಭಾವಿಸಿಕೊಂಡಾಗ ಮಾತ್ರ ಸಾಂಸ್ಕೃತಿಕ ಸಂವಾದ ಸಾಧ್ಯ. ಆಗ ಉಡಾಫೆ ಹೊರಟು ಹೋಗುತ್ತದೆ ಎಂದು ಹೇಳಿದರು.

ಸಾಂಸ್ಕೃತಿಕ ಲೋಕಕ್ಕೆ ಸಮಚಿತ್ತತೆ ಮತ್ತು ಪಕ್ವತೆ ಬೇಕು. ಸಂವಾದದಿಂದ ಎಷ್ಟೋ ಬದಲಾವಣೆ ಹಾಗೂ ತಪ್ಪು ಕಲ್ಪನೆ ತೊಲಗಲು ಸಾಧ್ಯ ಇದೆ. ಅಂತಹ ಸಂವಾದ ಸಾಧ್ಯವಾಗಬೇಕಾದರೆ ಸಿನಿಕರಾಗಬಾರದು ಮತ್ತು ಸಮೂಹ ಸನ್ನಿಗೆ ಒಳಗಾಗಬಾರದು. ಈ ಮೂಲಕ ಸಾಂಸ್ಕತಿಕ ಕ್ಷೇತ್ರದ ಆರೋಗ್ಯ ಕಾಪಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಥಾ ವಿಭಾಗದಲ್ಲಿ ರವಿಕುಮಾರ್ ನೀಹ, ಕವನ ವಿಭಾಗದಲ್ಲಿ ಗೀತಾ ಮಂಜು ಬೆಣ್ಣೆಹಳ್ಳಿ, ಶಶಿ ತರೀಕೆರೆ, ಪ್ರಬಂಧ ವಿಭಾಗದಲ್ಲಿ ಶಿವರಾಜ ಬ್ಯಾಡರಹಳ್ಳಿ, ಕರವೀರಪ್ರಭು ಕ್ಯಾಲಕೊಂಡ ಅವರಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿ.ಸೋಮಶೇಖರ್ ಮತ್ತು ಸರ್ವಮಂಗಲ ದತ್ತಿ ಪ್ರಶಸ್ತಿಯನ್ನು ಫ್ರೊ. ಧರಣೀಂದ್ರ ಕುರಕರಿ, ಮಹಾಂತೇಶ ಪಾಟೀಲ ಅವರಿಗೆ ಪ್ರದಾನ ಮಾಡಲಾಯಿತು.

ಸ್ವಾಭಿಮಾನಿ ಕರ್ನಾಟಕ ವೇದಿಕೆ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ, ಕನ್ನಡ ಪ್ರುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ, ಕಾದಂಬರಿಕಾರ ಶಶಿಧರ ಹಾಲಾಡಿ, ಕವಯತ್ರಿ ಇಂದಿರಾ ಪ್ರಸನ್ನ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.