ದಾಬಸ್ಪೇಟೆ: ಕೊರಟಗೆರೆ ರಸ್ತೆಯಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ತಿಮ್ಮಪ್ಪನಪಾಳ್ಯದ ಹನುಮಂತರಾಯಪ್ಪ ಮೃತಪಟ್ಟವರು.

ದಾಬಸ್ಪೇಟೆಗೆ ಹೋಗಿ ಮಂಡಿ ನೋವಿಗೆ ಚುಚ್ಚಮದ್ದು ತೆಗೆದುಕೊಂಡು ಆಟೊದಲ್ಲಿ ಊರಿನತ್ತ ಪ್ರಯಾಣಿಸುತ್ತಿದ್ದರು. ನರಸೀಪುರ ತೋಪಿನಲ್ಲಿ ಆಟೊ ಇಳಿದು ರಸ್ತೆ ದಾಟುವಾಗ ದಾಬಸ್ಪೇಟೆ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದರಿಂದ ಹನುಮಂತರಾಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ಚಾಲಕ ಕಾರು ನಿಲುಗಡೆ ಮಾಡದೇ ತೆರಳುತ್ತಿದ್ದ. ಮಾಕೇನಹಳ್ಳಿ ಬಳಿ ಸ್ಥಳೀಯರು ಕಾರನ್ನು ಅಡ್ಡಹಾಕಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ದಾಬಸ್ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಯಿತು. ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.