ವಚನ ದಿನ ಆಯೋಜನೆ

7

ವಚನ ದಿನ ಆಯೋಜನೆ

Published:
Updated:

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನ ಶಿವಗಂಗೆ ಹೊನ್ನಮ್ಮ ಗವಿ ಮಠದ ಅನುಭವ ಮಂಟಪದಲ್ಲಿ ಸೆ.6ರಂದು ಮಧ್ಯಾಹ್ನ 1ಕ್ಕೆ ’ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌’ ಮತ್ತು ನೆಲಮಂಗಲ ತಾಲ್ಲೂಕು ಶರಣ ಸಾಹಿತ್ಯ ಪರಿಷತ್‌ ‘ಸಹಯೋಗದಲ್ಲಿ ‘ವಚನ ದಿನ’ ಹಾಗೂ ’ದತ್ತಿ ಉಪನ್ಯಾಸ’ ಆಯೋಜಿಸಲಾಗಿದೆ.

ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ ವಚನ ಸಾಹಿತ್ಯದಲ್ಲಿ ಪ್ರತಿಪಾದಿತವಾಗಿರುವ ವಿಶ್ವ ಮೌಲ್ಯಗಳ ವಿಷಯ ಕುರಿತು, ಸಾಹಿತಿ ರುದ್ರಮೂರ್ತಿ ವಚನ ವಾಚನ ವಿಶ್ಲೇಷಣೆ ಕುರಿತು ಮತ್ತು ಬಸವೇಶ್ವರ ಮಹಿಳಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಅಕ್ಕಮಹಾದೇವಿ ಅವರು ವಚನ ಸಂಪತ್ತು ಉಳಿಸಿಕೊಟ್ಟವರು ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಬಿ.ಶಿವಶಂಕರಯ್ಯ ತಿಳಿಸಿದ್ದಾರೆ. ಹೊನ್ನಮ್ಮ ಗವಿ ಮಠದ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !