ಗುರುವಾರ , ಅಕ್ಟೋಬರ್ 6, 2022
26 °C

ದಾಬಸ್‌ಪೇಟೆ: ನಿರ್ಗತಿಕರಿಗೆ ಮಾಸಾಶನ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಬಸ್‌ಪೇಟೆ: ಆರ್ಥಿಕ ದುರ್ಬಲರು ಹಾಗೂ ಅಂಗವಿಕಲರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸೋಂಪುರ ಹೋಬಳಿ ನರಸೀಪುರ ಗ್ರಾಮದಲ್ಲಿ ಮಾಸಾಶನ ವಿತರಣೆ ಮಾಡಲಾಯಿತು.

ಮಾನವ ಚಾರಿಟೀಸ್‌ನ ಎಚ್.ಬಿ. ನಾಗಭೂಷಣ, ‘ಕೋವಿಡ್‌ ಬಿಕ್ಕಟ್ಟಿನಿಂದ ನಿರ್ಗತಿಕರು ಜೀವನ ನಡೆಸುವುದು ಕಷ್ಟವಾಗಿದೆ. ಅದನ್ನು ಮನಗಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ತಾಲ್ಲೂಕಿನ ಉದ್ದಕ್ಕೂ ಇರುವ ಅರ್ಹ ನಿರ್ಗತಿಕರನ್ನು ಗುರುತಿಸಿ ಜೀವನ ನಿರ್ವಹಣೆಗೆ ಮಾಸಾಶನ ನೀಡುತ್ತಿರುವುದು ಸಂತೋಷದ ಸಂಗತಿ’ ಎಂದರು.

ಸಂಸ್ಥೆಯ ಪದಾಧಿಕಾರಿಗಳಾದ ರಮೇಶ್, ಚಕ್ರವರ್ತಿ ರಘುನಂದನ್, ರಾಜಣ್ಣ, ಮಂಜುನಾಥ್ ಪ್ರಸಾದ್, ವಿನೋದ್ ಉಪಸ್ಥಿತರಿದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು