ಶನಿವಾರ, ಜನವರಿ 23, 2021
28 °C
ನೆಲಮಂಗಲ ತಾಲ್ಲೂಕು: ರಾಗಿ ಬೆಳೆಗಾರರು ಹೈರಾಣು

ಒಕ್ಕಣೆಗೆ ಅಡಚಣೆಯಾದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಬಸ್ ಪೇಟೆ: ಒಕ್ಕಣೆ ಸಮಯದಲ್ಲಿ ಬರುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ನೆಲಮಂಗಲ ತಾಲ್ಲೂಕಿನ ರೈತರು ಹೈರಾಣಾಗಿದ್ದಾರೆ.

ತಾಲ್ಲೂಕಿನಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು, ಶೇ 70ರಷ್ಟು ರೈತರು ರಾಗಿ ಪೈರು ಕೊಯಿಲು ಮಾಡಿ ಮೆದೆ ಹಾಕಿಕೊಂಡಿದ್ದು, ಕಣದಲ್ಲಿ ಒಕ್ಕಣೆ ಮಾಡಿಕೊಳ್ಳಲು ತಯಾರು ಮಾಡಿಕೊಂಡಿರುವಾಗಲೇ ಜಿಟಿ ಮಳೆ ಬರುತ್ತಿ ರುವುದು ಅವರನ್ನು ಸಂಕಷ್ಟಕ್ಕೀಡು ಮಾಡಿದೆ.

ಕೊಯಿಲು ಮಾಡುವಾಗ. ಕೂಡಿಟ್ಟುಕೊಳ್ಳುವಾಗಲೂ ತುಂತುರು ಹಾಗೂ ಜೋರು ಮಳೆ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈಗ ಒಕ್ಕಣೆ ಮಾಡಿ ಕೊಳ್ಳುವ ಹೊತ್ತಿನಲ್ಲಿ ಮತ್ತೆ ಮಳೆ ಬಂದಿದೆ. 

ಮೋಡ ಕವಿದ ವಾತಾವರಣ, ಮಳೆ ಹಾಗೂ ಚಳಿ ಶೀತಗಾಳಿ ಹೆಚ್ಚಾಗಿದ್ದು, ಇಂಥ ಸಂದರ್ಭದಲ್ಲಿ ಮಾವು, ಅವರೆ ಹಾಗೂ ಟೊಮೆಟೊ, ವಿವಿಧ ಹೂಗಳು ರೋಗ ಪೀಡಿತವಾಗುತ್ತಿವೆ.

ಮಾವಿನ ತೋಟಗಳಲ್ಲಿ ಈಗ ಹೂ ಬರುತ್ತಿದೆ. ಕೆಲವು ಕಡೆ ಬಂದಿದೆ. ರಾಗಿ ಜೊತೆ ಹಾಗೂ ಪ್ರತ್ಯೇಕವಾಗಿ ಬೆಳೆಯಲಾಗಿರುವ ಅವರೆ ಹೊಲಗಳಲ್ಲಿ ಹೂ ಇದೆ. ಸಂಕ್ರಾತಿ ಸಮಯಕ್ಕೆ ಅವರೆಕಾಯಿ ಸಿಕ್ಕಿದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುತ್ತದೆ. ಬೇಸಿಗೆ ಆರಂಭವಾಗಿದ್ದು ಶುಭ ಸಮಾರಂಭ ಆರಂಭವಾಗುವುದರಿಂದ ತರಕಾರಿ, ಹೂ ಹಣ್ಣುಗಳಿಗೆ ಬೆಲೆ ಎಂದು ಹಲವು ರೈತರು ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ.

ಮಾವಿನ ಮರಗಳಿಗೆ ಔಷಧ ಸಿಂಪಡಣೆ ಮಾಡಲು ಇದು ಸಕಾಲ. ಆದರೆ, ಮೋಡ ಮುಸುಕಿದ ವಾತಾ ವರಣ ಮತ್ತು ಬೀಳುತ್ತಿರುವ ಮಳೆ ಅದಕ್ಕೆ ಅವಕಾಶ ನೀಡುತ್ತಿಲ್ಲ.

ಮೋಡ ಮುಸುಕಿದ ವಾತಾವರಣದಿಂದಾಗಿ ಮಾವಿನ ಮರಗಳಿಗೆ ಔಷಧ ಸಿಂಪಡಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಹೂ ಬರುವುದು ತಡ ವಾಗುತ್ತದೆ ಹಾಗೂ ಬಂದಿರುವ ಹೂ ರೋಗ ಪೀಡಿತವಾಗುತ್ತಿದೆ ಎಂಬುದು ಮಾವು ಬೆಳೆಗಾರ ಪ್ರವೀಣ್ ಅವರ ಅಳಲು.

ರಾಗಿ, ಭತ್ತ ಒಕ್ಕಣೆ ಜೊತೆಗೆ ತೊಗರಿ, ಅವರೆ, ಅಲಸಂದೆ ತಳ್ಳುಗಳ ಒಕ್ಕಣೆಯನ್ನು, ಕಣಗಳಲ್ಲಿ ಮಾಡಿಕೊಳ್ಳುವ ಕಾಲದಲ್ಲಿ ಬಂದಿರುವ ಅಕಾಲಿಕ ಮಳೆಯಿಂದ ತೊಂದರೆ ಉಂಟಾಗಿದೆ ಎನ್ನುತ್ತಾರೆ ರೈತ ವಿಶ್ವನಾಥ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು